SIM CARD ಇಲ್ಲದೆ 20 ರೂಗೆ 1 ಜಿಬಿ ಡೇಟಾ….: ಬೆಂಗಳೂರಿನಲ್ಲಿ ಕ್ರಾಂತಿ ಮಾಡುತ್ತಿದೆ ವೈಫೈ ಡಬ್ಬಾ….!

ಅತಿ ಹೆಚ್ಚು ದುಡ್ಡು ಕೊಟ್ಟು ಡೇಟಾ ಪಡೆಯುತ್ತಿದ್ದ ಕಾಲ ಹೊರಟು ಹೋಗಿದೆ. ಭಾರತಕ್ಕೆ ಜಿಯೋ ಬಂದ ಮೇಲೆ ಅತಿ ಕಡಿಮೆ ಬೆಲೆಯಲ್ಲಿ ಇಂಟರ್‌ನೆಟ್‌ ಕ್ರಾಂತಿ ಎಬ್ಬಿಸಿದೆ. ಜಿಯೋ ಬಂದ ಮೇಲೆ ಎಲ್ಲಾ ಕಂಪನಿಗಳು ಆಫರ್‌ಗಳ ಮೇಲೆ ಆಫರ್‌ ನೀಡುತ್ತಾ ಸ್ಪರ್ಧೆಯೊಡ್ಡುತ್ತಿದ್ದರೂ ಜಿಯೋವನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ.

ಆದರೆ ಬೆಂಗಳೂರಿನ ಸ್ಟಾರ್ಟ್ ಅಪ್‌ ಕಂಪನಿಯೊಂದು ಕೇವಲ 20 ರೂಗೆ 4 ಜಿಬಿಗಿಂತಲೂ ಹೈಸ್ಪೀಡ್‌ ಡಾಟಾ ನೀಡುತ್ತಿದೆ. ಇದಕ್ಕೆ ಸಿಮ್‌ ಕಾರ್ಡ್‌ನ ಅಗತ್ಯವೇ ಇಲ್ಲವಂತೆ. ಇದಕ್ಕಾಗಿ ಬೆಂಗಳೂರಿನ 350 ಕಡೆಗಳಲ್ಲಿ ವೈಫೈ ರೂಟರ್‌ಗಳನ್ನು ಅಳವಡಿಸಿದ್ದು, ಅದಕ್ಕೆ ವೈಫೈ ಡಬ್ಬ ಎಂಬ ಹೆಸರಿಟ್ಟಿದೆ.

ಇದಕ್ಕಾಗಿ ನೀವು ಮಾಡಬೇಕಾಗಿರುವುದಿಷ್ಟೇ. 20 ರೂ ರೀಚಾರ್ಜ್‌ ಕೂಪನ್‌ ಪಡೆದು www.wifidabba.com ಗೆ ಲಾಗಿನ್‌ ಆಗಿ ಅಲ್ಲಿ ಮೊಬೈಲ್‌ ನಂಬರ್‌ ಜೊತೆ ಕೂಪನ್‌ ಕೀಯನ್ನು ಹಾಕಬೇಕು. ಬಳಿಕ ಇದು ಒಟಿಪಿಯಿಂದ ವೆರಿಫೈ ಆಗುತ್ತದೆ. ನಂತರ ಈ ಸೇವೆಯನ್ನು ಪಡೆಯಬಹುದು. ಬೆಂಗಳೂರಿನಲ್ಲಿ ಈ ಸೇವೆ ಲಭ್ಯವಿದ್ದು, ಸದ್ಯದಲ್ಲೇ ರಾಜ್ಯದೆಲ್ಲೆಡೆ ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ.

 

Leave a Reply

Your email address will not be published.

Social Media Auto Publish Powered By : XYZScripts.com