ಯೋಗಿ ಭಾಷಣ ಕೇಳಲು ಬುರ್ಖಾ ಧರಿಸಿ ಬಂದ ಮುಸ್ಲಿಂ ಮಹಿಳೆಗೆ ಏನು ಮಾಡಿದ್ರು ನೋಡಿ….

ಲಖನೌ : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಸಮಾವೇಶಕ್ಕೆ ಮುಸ್ಲಿಂ ಮಹಿಳೆಯೊಬ್ಬರು ಬುರ್ಖಾ ಧರಿಸಿ ಬಂದಿದ್ದರು. ಈ ವೇಳೆ ಮಹಿಳಾ ಪೊಲೀಸರು ಮಹಿಳೆಯ ಬುರ್ಖಾ ತೆಗಸಿದ ಸಂಗತಿ ನಡೆದಿದೆ.

ಮಂಗಳವಾರ ಬಲಿಯಾ ಪ್ರದೇಶದಲ್ಲಿ ಸ್ಥಳೀಯ ಚುನಾವಣೆ ಪ್ರಯಕ್ತ ಬಿಜೆಪಿ ಸಮಾವೇಶ ಹಮ್ಮಿಕೊಂಡಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತೆಯಾಗಿದ್ದ ಮುಸ್ಲಿಂ ಮಹಿಳೆ ಬುರ್ಖಾ ಧರಿಸಿಯ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಮೂವರು ಮಹಿಳಾ ಪೊಲೀಸ್ ಅಧಿಕಾರಿಗಳು ಆಗಮಿಸಿ ಮಹಿಳೆಗೆ ಬುರ್ಖಾ ತೆಗೆಯುವಂತೆ ಸೂಚಿಸಿರುವುದಾಗಿ ಮೂಲಗಳು ಹೇಳಿವೆ.

ಪೊಲೀಸ್ ಅಧಿಕಾರಿಗಳು ನನ್ನ ಬಳಿ ಬಂದು ಕಾರಣ ಏನೆಂದು ಹೇಳದೆ ಬುರ್ಖಾ ತೆಗೆಯುವಂತೆ ಸೂಚಿಸಿದರು. ಕೊನೆಗೆ ಸಾರ್ವಜನಿಕವಾಗಿಯೇ ನಾನು ಬುರ್ಖಾ ತೆಗೆದೆ ಎಂದು ಮುಸ್ಲಿಂ ಮಹಿಳೆ ಹೇಳಿದ್ದಾರೆ. ಆದರೆ ಈ ವಿಚಾರ ಸಂಬಂಧ ಮಹಿಳೆ ಆಕ್ರೋಶ ವ್ಯಕ್ತಪಡಿಸದೆ, ಎಲ್ಲರೆದುರು ಬುರ್ಖಾ ತೆಗೆಸಿದ್ದಕ್ಕೆ ಬೇಜಾರಾಗಿದೆ ಎಂದಿದ್ದಾರೆ.

ಘಟನೆ ಬಗ್ಗೆ ನನಗೆ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ. ಆದರೆ ಯೋಗಿ ಸಮಾವೇಶದಲ್ಲ ಕಪ್ಪು ಬಟ್ಟೆ ಧರಿಸಿ ಬರಬಾರದು ಎಂದು ಮೊದಲೇ ಆದೇಶಿಸಲಾಗಿತ್ತು. ಮಹಿಳೆ ವಿಚಾರವಾಗಿ ಮಾಹಿತಿ ಕಲೆ ಹಾಕಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

 

 

 

 

Leave a Reply

Your email address will not be published.