ನನ್ನನ್ನು ಮದುವೆಯಾಗಲು ಈ ನಂಬರ್‌ಗೆ ಕರೆ ಮಾಡಿ ಎಂದ ಖ್ಯಾತ ನಟ…..ಯಾರದು?

ತಮಿಳು, ತೆಲಗು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಸ್ಟಾರ್‌ ನಟರ ಪಟ್ಟಿಯಲ್ಲಿರುವ ನಟ ಆರ್ಯ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದಾರಂತೆ. ಹೌದು ಹೀಗಂತ ಅವರೇ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

ಸದ್ಯ ರಾಜರಥ ಸಿನಿಮಾದಲ್ಲಿ ಬ್ಯುಸಿಯಾಗಿರುವ ಆರ್ಯ, ತಮ್ಮ ಮದುವೆಯ ಕುರಿತು ಜಿಮ್‌ನಲ್ಲಿ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಅವ ಹೇಳಿಕೆಯನ್ನು ವಿಡಿಯೊ ಮಾಡಿದ್ದು ಫೇಸ್‌ಬಕ್‌ನಲ್ಲಿ ಹಾಕಲಾಗಿದೆ.

ಈ ವಿಡಿಯೊವನ್ನು ನನ್ನ ಸ್ನೇಹಿತರು ಅಪ್‌ಲೋಡ್‌ ಮಾಡಿದ್ದಾರೆ. ಆದರೆ ಇದರಲ್ಲಿ ಹೇಳಿರುವುದು ನಿಜ. ನನಗೆ ಯಾವುದೇ ಷರತ್ತು ಇಲ್ಲ. ನಾನು ಇಷ್ಟವಾದರೆ ನನ್ನ ನಂಬರ್‌ಗೆ ಕರೆ  ಮಾಡಿ. ನನಗೂ ಇಷ್ಟವಾದರೆ ಮದುವೆಯಾಗುತ್ತೀನಿ ಎಂದಿದ್ದಾರೆ.

ಜೊತೆಗೆ ಇದು ತಮಾಷೆಯ ವಿಚಾರವಲ್ಲ, ನನ್ನ ಜೀವನದ ಬಗ್ಗೆ ನಾನು ಬಹಳ ಗಂಭೀರನಾಗಿದ್ದೇನೆ ಎಂದು ತಮ್ಮ ಫೋನ್‌ ನಂಬರ್‌ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com