WATCH : ಸ್ಟಂಪ್ ಹಿಂದಿನಿಂದ ಶಾಟ್ ಹೊಡೆಯಲು ಬ್ಯಾಟ್ಸಮನ್ ಯತ್ನ : ಬೌಲರ್ ಮಾಡಿದ್ದೇನು.?

ಶ್ರೀಲಂಕಾ ಬ್ಯಾಟ್ಸಮನ್ ಚಾಮರ ಸಿಲ್ವಾ ವಿಚಿತ್ರ ಶಾಟ್ ಹೊಡೆಯಲು ಹೋಗಿ ನಗೆಪಾಟಲಿಗೀಡಾಗಿದ್ದಾರೆ. ಕೋಲಂಬೊದಲ್ಲಿ MAS ಉನಿಚೆಲಾ ಹಾಗೂ ತೀಜಯ್ ಲಂಕಾ ನಡುವಿನ ಪಂದ್ಯದಲ್ಲಿ ಚಾಮರ ಸಿಲ್ವಾ, ಸ್ಟಂಪ್ ಹಿಂದಕ್ಕೆ ಹೋಗಿ ಪುಲ್ ಶಾಟ್ ನಂತೆ ತೋರುವ, ವಿಚಿತ್ರ ಶಾಟ್ ಹೊಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಜಾಣ್ಮೆಯನ್ನು ತೋರಿದ ಬೌಲರ್, ನೇರವಾಗಿ ವಿಕೆಟ್ ನತ್ತ ಎಸೆದು ಬೋಲ್ಡ್ ಮಾಡಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಹರಿದಾಡುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಶಾಟ್ ನೋಡಿ ಕನ್ಫ್ಯೂಸ್ ಆಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com