ಜೆ.ಎಚ್‌ ಪಟೇಲರು ಸಿದ್ದರಾಮಯ್ಯಂಗೆ ಹೊಡೆಯಲು ಚಪ್ಪಲಿ ಕೈಗೆ ತೆಗೆದುಕೊಂಡಿದ್ದರು : ಎಚ್‌ಡಿಡಿ

ಕೊಪ್ಪಳ : ಹೆಗಡೆಯವರನ್ನು ಸಿಎಂ  ಮಾಡಿದ್ದು ನಾನೇ. ಅವರು ಮುಖ್ಯಮಂತ್ರಿ ಆಗುವುದನ್ನು ನಾನು ತಪ್ಪಿಸಿದ್ದಲ್ಲ. ಆದರೆ ಸಿದ್ದರಾಮಯ್ಯ ಅವರಿಗೆ ನಾನೇ ಸಿಎಂ ಸ್ಧಾನ ತಪ್ಪಿಸಿದ್ದೆ ಎನ್ನುತ್ತಾರೆ. ಸಿದ್ದರಾಮಯ್ಯನವರಿಗೆ ಒಂದಲ್ಲಾ ಒಂದು ದಿನ ಇದರ ಬಗ್ಗೆ ರಿಯಲೈಜ್ ಆಗುತ್ತದೆ  ಎಂದು ಮಾಜ ಪ್ರಧಾನಿ ಎಚ್‌. ಡಿ ದೇವೇಗೌಡ ಹೇಳಿದ್ದಾರೆ.

ಕೊಪ್ಪಲದಲ್ಲಿ ನಡೆದ ಸಭೆಯೊಂದರಲ್ಲಿ  ಮಾತನಾಡಿದ ಸಿಎಂ, ಸಿದ್ದರಾಮಯ್ಯ ಹೆಗಡೆಯವರಿಗಿಂತ ದೊಡ್ಡ ಲೀಡರ್ ಅಲ್ಲ. ಅವರು ಎಲ್ಲಿದ್ದರು, ಸಿದ್ದರಾಮಯ್ಯನವರನ್ನು ಉಪಮುಖ್ಯಮಂತ್ರಿ ಮಾಡಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ 1996ರಲ್ಲಿ ಸಿಎಂ ಆಗಬೇಕಿತ್ತು ಎಂದಿದ್ದಾರೆ. ಅಂದು ಸಿದ್ದರಾಮಯ್ಯನವರಿಗೆ ಕರ್ನಾಟಕ ಭವನದಲ್ಲಿ ಜೆ.ಎಚ್ ಪಟೇಲರು ಚಪ್ಪಲಿ ತೆಗೆದುಕೊಂಡಿದ್ದರು. ಸಿದ್ದರಾಮಯ್ಯನಿಗೆ ದುಡ್ಡಿದೆ, ಅಹಂಕಾರವಿದೆ ಮಾತಾಡುತ್ತಾರೆ, ಮಾತನಾಡಲಿ. ಆದರೆ ದೇವೇಗೌಡರಿಗೆ ಜನರೇ ದೊಡ್ಡ ಶಕ್ತಿ ಎಂದಿದ್ದಾರೆ.

ಮಹದಾಯಿ ವಿಚಾರವಾಗಿ ನರೇಂದ್ರ ಮೋದಿಯವರಿಗೆ ಕೈಮುಗಿದು ಕೇಳಿದ್ರೂ ಏನೂ ಮಾತಾಡಲಿಲ್ಲ. ಮಹಾದಾಯಿ ವಿವಾದ ಬಗೆಹರಿಸಿದ್ರೆ ಅನಂತ ನಮಸ್ಕಾರ ಮಾಡುತ್ತೇನೆ. ಯಡಿಯೂರಪ್ಪ ಸಮಸ್ಯೆ ಬಗೆಹರಿಸಿದರೆ ನನ್ನ ಕಡೆಯಿಂದ ದೊಡ್ ನಮಸ್ಕಾರ ಮಾಡುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com