26/11ರ ದಾಳಿಯ ಮಾಸ್ಟರ್‌ ಮೈಂಡ್‌ ಹಫೀಜ್‌ ಬಿಡುಗಡೆಗೆ ಪಾಕ್ ಕೋರ್ಟ್‌ ಆದೇಶ

ಇಸ್ಲಾಮಾಬಾದ್‌ : 26 -11 ದಾಳಿಯ ಆರನೇ ವರ್ಷಾಚರಣೆಗೆ 4 ದಿನ ಇರುವಾಗಲೇ ದಾಳಿಯ ಮಾಸ್ಟರ್‌ ಮೈಂಡ್‌ ಹಫೀಜ್‌ ಸಯ್ಯದ್‌ನನ್ನು ಬಿಡುಗಡೆ ಮಾಡುವಂತೆ ಪಾಕ್‌ ನ್ಯಾಯಾಲಯ ಆದೇಶ ಹೊರಡಿಸಿದೆ.
ಜಮಾತ್‌ ಉದ್‌ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿರುವ ಹಫೀಜ್‌ ಸಯ್ಯದ್‌, ಮುಂಬೈ ದಾಳಿಯ ಮಾಸ್ಟರ್‌ ಮೈಂಡ್ ಆಗಿದ್ದಾನೆ. ಭಾರತದ ಒತ್ತಡದ ಹಿನ್ನೆಲೆಯಲ್ಲಿ ಈತನನ್ನು ಜನವರಿ 31ರಿಂದ ಗೃಹ ಬಂಧನದಲ್ಲಿರಿಸಲಾಗಿತ್ತು. ಅಲ್ಲದೆ ಆತನ ಸಹಚರರನ್ನು ಪಂಜಾಬ್‌ ಸರ್ಕಾರ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿಯಲ್ಲಿ 90 ದಿನಗಳ ಕಾಲ ಬಂಧಿಸಿತ್ತು.

Leave a Reply

Your email address will not be published.