ಹಿಂದೂಮಹಾಸಭಾದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ನಾಥೂರಾಂ ಗೋಡ್ಸೆ ಪ್ರತಿಮೆ ತೆರವು..

ಗ್ವಾಲಿಯರ್ : ಅಖಿಲ ಭಾರತ ಹಿಂದೂ ಮಹಾಸಭಾ ಕಚೇರಿಯಲ್ಲಿ ಸ್ಥಾಪಿಸಲಾಗಿದ್ದ ನಾಥೂರಾಂ ಗೋಡ್ಸೆ ಮೂರ್ತಿಯನ್ನ ತೆಗೆದು ಹಾಕುವಂತೆ ಆದೇಶಿಸಲಾಗಿದೆ.

ಗೋಡ್ಸೆ ಮೂರ್ತಿ ಸ್ಥಾಪಿಸಿದ್ದಕ್ಕಾಗಿ ರಾಜ್ಯದ ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಗಾಂಧೀಜಿಯನ್ನು ಕೊಂದ ಗೋಡ್ಸೆ ಮೂರ್ತಿ ತೆರವುಗೊಳಿಸುವಂತೆ ಗ್ವಾಲಿಯರ್‌ನ ಡಿಸಿ ಆದೇಶಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದಂತೆ ಸ್ಥಳೀಯ ಪೊಲೀಸರು ಮೂರ್ತಿಯನ್ನು ತೆರವುಗೊಳಿಸಿದ್ದು, ಆ ದೇವಾಲಯವನ್ನು ಸೀಜ್ ಮಾಡಿದ್ದಾರೆ.

ಇದಕ್ಕೆ ಬಿಜೆಪಿ ಸೇರದಂತೆ ಹಲವು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಡಿಸಿ ಆದೇಶ ಸರಿಯಲ್ಲ. ಇದಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದಿದ್ದಾರೆ.

ಇತ್ತೀಚೆಗಷ್ಟೇ ಹಿಂದೂಮಹಾಸಭಾ ಕಚೇರಿಯಲ್ಲಿ ಗೋಡ್ಸೆಗೆ ದೇವಾಲಯ ನಿರ್ಮಿಸ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಆದರೆ ಇದಕ್ಕೂ ಮೊದಲು ದೇವಾಲಯ ನಿರ್ಮಾಣಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಆದರೂ ದೇವಾಲಯ ನಿರ್ಮಿಸಿದ್ದು, ನಾವು ನಮ್ಮ ಸ್ವಂತ ಜಾಗದಲ್ಲಿ ದೇವಸ್ಥಾನ ನಿರ್ಮಿಸಿದ್ದು, ಇದನ್ನು ವಿರೋಧಿಸಲು ಯಾರಿದಂಲೂ ಸಾಧ್ಯವಿಲ್ಲ ಎಂದು ಮಹಾಸಭಾ ಮುಖಂಡ ಭಾರದ್ವಾಜ್‌ ಹೇಳಿದ್ದರು.

Leave a Reply

Your email address will not be published.