45 ಸಾವಿರ ಮೌಲ್ಯದ 9 ಸಾವಿರ ಮೊಟ್ಟೆ ಕದ್ದ ಕಳ್ಳರು : ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ರು

ಧಾರವಾಡ : ಕೋಳಿ ಫಾರಂನಿಂದ ಸುಮಾರು 45 ಸಾವಿರ ರೂ ಮೌಲ್ಯದ ಮೊಟ್ಟೆಗಳನ್ನು ಕದ್ದು ಪರಾರಿಯಾಗುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ಮೊಟ್ಟೆ ಕಳ್ಳರನ್ನು ಮೈಲಾರಪ್ಪ ಕಲ್ಲೂರ, ಕಲಘಟಗಿಯ ಶಂಕರ್‌ ಜಾದವ್‌ ಹಾಗೂ ಕಲ್ಲಪ್ ಗುಡಿಹಾಳ ಎಂದು ತಿಳಿದುಬಂದಿದೆ.

ಕುಲಕರ್ಣಿ ಎಂಬುವವರ ಕೋಳಿ ಫಾರಂನಲ್ಲಿ ಈ ಘಟನೆ ನಡೆದಿದ್ದು, ಫಾರಂನಲ್ಲಿದ್ದ ಸುಮಾರು 45 ಸಾವಿರ ರೂ ಮೌಲ್ಯದ 9 ಸಾವಿರ ಮೊಟ್ಟೆಗಳನ್ನು ಕಳ್ಳತನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೋಳಿ ಫಾರಂ ಮಾಲೀಕರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೂವರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com