ಸುಖೋಯ್‌ ಯುದ್ದ ವಿಮಾನದ ಮೂಲಕ ಬ್ರಹ್ಮೋಸ್‌ ಕ್ಷಿಪಣಿಯ ಯಶಸ್ವಿ ಪ್ರಯೋಗ….

ದೆಹಲಿ : ವಿಶ್ವದ  ಅತ್ಯಂತ ವೇಗದ ಬ್ರಹ್ಮೋಸ್‌ ಕ್ಷಿಪಣಿ, ಸುಖೋಯ್‌-30 ಎಂಕೆಐ ಯುದ್ದ ವಿಮಾನದ ಮೂಲಕ ಯಶಸ್ವಿಯಾಗಿ ಉಡಾವಣೆಯಾಗಿದೆ
ಈ ಬ್ರಹ್ಮೋಸ್‌ ಕ್ಷಿಪಣಿ ಸುಮಾರು 2.5 ಟನ್‌ ತೂಕವಿದ್ದು, ಮೊಟ್ಟ ಮೊದಲ ಬಾರಿಗೆ ಭಾರತೀ ವಾಯುಪಡೆಯ ದೊಡ್ಡ ಯುದ್ದ ವಿಮಾನ ಸುಖೋಯ್‌-30ಗೆ ಅಳವಡಿಸಿ ಉಡಾವಣೆ ಮಾಡಲಾಗಿದೆ.
ಬ್ರಹ್ಮೋಸ್‌ ಕ್ಷಿಪಣಿ ನಿಗದಿತ ಅವಧಿಯಲ್ಲಿ, ನಿಗದಿತ ದೂರವನ್ನು ಕ್ರಮಿಸುವ ಮೂಲಕ ಯಶಸ್ವಿಯಾಗಿ ಉಡಾವಣೆಗೊಂಡಿದ್ದಿ ದೇಶಕ್ಕೆ ಮತ್ತೊಂದು ಹೆಮ್ಮೆ ತಂದುಕೊಟ್ಟಿದೆ.
ಇದಕ್ಕಾಗಿ ಬಂಗಾಳ ಕೊಲ್ಲಿಯಲ್ಲಿ ಗುರಿಯನ್ನ ನಿರ್ಮಾಣ ಮಾಡಲಾಗಿದ್ದು, ನಿಗದಿತ ಸಮಯದಲ್ಲಿ ಆ ಗುರಿ ತಲುಪಿದೆ. ಈ ಹಿಂದೆ ಮೊಬೈಲ್ ಲಾಂಚರ್‌ ಮೂಲಕ ಒಡಿಶಾದಲ್ಲಿ ಕ್ಷಿಪಣಿಯನ್ನು ಉಡಾವಣೆ  ಮಾಡಲಾಗಿತ್ತು.
ವಾಯುಮಾರ್ಗದ ಮೂಲಕ ಬ್ರಹ್ಮೋಸ್‌ ಇದೇ ಮೊದಲ ಬಾರಿಗೆ ಉಡಾವಣೆಗೊಂಡಿದ್ದು ಮೊದಲ ಹಂತದಲ್ಲೇ ಯಶಸ್ವಿಯಾಗಿದೆ.
ವಿಜ್ಞಾನಗಳ ಪ್ರಯತ್ನಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com