ಬಿಹಾರದಲ್ಲಿ ಅನೇಕ ಜನ ಮೋದಿ ಕತ್ತನ್ನು ಸೀಳಲು ಸಿದ್ಧರಿದ್ದಾರೆ : ರಾಬ್ಡಿ ದೇವಿ

‘ ಬಿಹಾರ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಕತ್ತನ್ನು ಸೀಳಿ, ಕೈಯನ್ನು ಕತ್ತರಿಸಲು ಅನೇಕ ಜನರು ಸಿದ್ಧರಾಗಿದ್ದಾರೆ ‘ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಹೇಳಿದ್ದಾರೆ.

ಮಂಗಳವಾರ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ರಾಬ್ಡಿದೇವಿ ‘ ಮೋದಿಯವರ ಕಡೆಗೆ ಬೆರಳು ತೋರಿದರೆ ಕೈಯನ್ನು ಮುರಿಯುವುದಾಗಿ ಬಿಜೆಪಿಯವರು ಹೇಳುತ್ತಾರೆ. ಹಾಗೆ ಮಾಡಿದರೆ ದೇಶದ ಜನ ಸುಮ್ಮನಿರುತ್ತಾರಾ..? ಬಿಹಾರದ ಜನ ಈ ಬಗ್ಗೆ ಏನೂ ಹೇಳುವುದಿಲ್ಲವೇ..? ಮೋದಿ ಕುತ್ತಿಗೆಯನ್ನು ಸೀಳಲು, ಕೈಯನ್ನು ಕತ್ತರಿಸಲು ಬಿಹಾರದಲ್ಲಿ ಅನೇಕ ಜನ ಸಿದ್ಧರಾಗಿದ್ದಾರೆ. ಜೈಲಿಗೆ ಹೋಗುವ ಪರಿಸ್ಥಿತಿ ಬಂದರೂ ಒಟ್ಟಾಗಿಯೇ ಜೈಲಿಗೆ ತೆರಳಲೂ ಬಿಹಾರ ಜನ ರೆಡಿಯಾಗಿದ್ದಾರೆ ‘ ಎಂದು ರಾಬ್ಡಿ ದೇವಿ ಹೇಳಿದ್ದಾರೆ.

Image result for rabri devi modi pm slit throat

‘ ಪ್ರಧಾನಿ ಮೋದಿಯವರ ಕಡೆ ಬೆರಳು ತೋರಿದವರ ಬೆರಳನ್ನು ಕತ್ತರಿಸಬೇಕು, ಕೈಗಳನ್ನು ಮುರಿಯಬೇಕು ‘ ಎಂದು ಬಿಹಾರ ಬಿಜೆಪಿ ಪಕ್ಷದ ಮುಖ್ಯಸ್ಥ ಹಾಗೂ ಲೋಕಸಭಾ ಸದಸ್ಯರಾಗಿರುವ ನಿತ್ಯಾನಂದ ರಾಯ್ ಹೇಳಿದ್ದರು.

Leave a Reply

Your email address will not be published.