BIGG BOSS : ಮನೆಯ ಮಹಿಳಾಮಣಿಯರಿಂದ ಜೆಕೆಗೆ ಸಿಕ್ತು ದುಬಾರಿ ಗಿಫ್ಟ್‌….ಏನದು….?

ಈ ಬಾರಿ ಬಿಗ್‌ಬಾಸ್‌ ಹೆಚ್ಚಿನ ಮನರಂಜನೆ ನೀಡದಿದ್ದರೂ ಶೋ ತನ್ನಷ್ಟಕ್ಕೆ ತಾನೆ ನಡೆಯುತ್ತಾ ಸಾಗುತ್ತಿದೆ. ಇತ್ತೀಚೆನ ಎಪಿಸೋಡ್ ಒಂದರಲ್ಲಿ ಫೇರ್‌ ಎಂಡ್‌ ಲವ್ಲಿ ಹ್ಯಾಂಡ್‌ ಕಂಪನಿ ತನ್ನ ನೂತನ ಆವಿಷ್ಕಾರವಾರ ಫೇರ್‌ ಎಂಡ್‌ ಹ್ಯಾಂಡ್‌ ಸಂ ಲೇಸರ್‌ ಟ್ವೇಲ್ವ್‌ನ ಪ್ರಮೋಷನ್‌ ನಡೆಸಿತ್ತು. ಇದಕ್ಕಾಗಿ ಒಂದು ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಇದರಲ್ಲಿ ಮನೆಯ ಪುರುಸರು ಈ ಕ್ರೀಂ ಹಚ್ಚಿಕೊಂಡು ರ್ಯಾಂಪ್‌ ವಾಕ್ ಮಾಡಬೇಕಿತ್ತು. ಇದಕ್ಕೆ ಮಹಿಳಾ ಸ್ಪರ್ಧಿಗಳೇ ತೀರ್ಪುಗಾರರಾಗಿದ್ದರು. ಈ ಟಾಸ್ಕ್‌ನಂತೆ ಎಲ್ಲಾ ಪುರುಷ ಸ್ಪರ್ಧಿಗಳು ಕ್ರೀಂ ಹಚ್ಚಿಕೊಂಡು ವೇದಿಕೆ ಮೇಲೆ ರ್ಯಾಂಪ್‌ ವಾಕ್‌ ಮಾಡಿದರು. ಅಷ್ಟೇ ಅಲ್ಲ, ಮಹಿಳಾ ಸ್ಪರ್ಧಿಗಳಿಗೆ ಇಷ್ಟವಾಗುವಂತೆ ಹಾಡು, ಡಾನ್ಸ್‌, ವಿಭಿನ್ನ ಮಾತಿನ ಶೈಲಿ ಮೂಲಕ ಮೆಚ್ಚಿಸುವ ಪ್ರಯತ್ನ ನಡೆಸಿದರು.

ಈ ಶೋನಲ್ಲಿ ಜೆಕೆ, ಅಶ್ವಿನಿ ನಕ್ಷತ್ರ ಧಾರಾವಾಹಿಯ ಫೇಮಸ್‌ ಡೈಲಾಗಿ ಹೇಳಿ ಮಹಿಳಾ ತೀರ್ಪುಗಾರರ ಮನಗೆದ್ದರು. ಇವರ ಪ್ರದರ್ಶನ ಮೆಚ್ಚಿದ ತೀರ್ಪುಗಾರರು ಅವರಿಗೆ ಹೆಂಚಿನ ಅಂಕ ನೀಡಿದರು. ಇದರಿಂದ ಜೆಕೆ ವಿನ್‌ ಆದರು. ಈ ಹಿನ್ನೆಲೆಯಲ್ಲಿ ಕಂಪನಿ ವತಿಯಿಂದ ಜೆಕೆಗೆ 2 ಲಕ್ಷ ನೀಡಲಾಯಿತು.

 

Leave a Reply

Your email address will not be published.

Social Media Auto Publish Powered By : XYZScripts.com