ಹಿರಿಯ ಕವಿ, ಲೇಖಕ, ಜಾನಪದ ವಿದ್ವಾಂಸ ಸೂಗಯ್ಯ ಹಿರೇಮಠ ಇನ್ನಿಲ್ಲ

ಕಲಬುರಗಿ : ಜಾನಪದ ವಿದ್ವಾಂಸರಾಗಿದ್ದ ಹಿರಿಯ ಕವಿ, ಲೇಖಕ ಪ್ರೊ. ಸೂಗಯ್ಯ ಹಿರೇಮಠ (68) ಅವರು ಮಂಗಳವಾರ ಸಂಜೆ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿಯರಿದ್ದಾರೆ.

ಕರುಣೇಶ್ವರ ನಗರದ ನಿವಾಸದಲ್ಲಿ ಸೂಗಯ್ಯ ಅವರಿಗೆ ಸಂಜೆ ಎದೆನೋವು ಕಾಣಿಸಿಕೊಂಡಿತು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದರು.

ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಸಿಂಗನಳ್ಳಿ ಗ್ರಾಮದವರು. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು ತಮ್ಮ ವೃತ್ತಿ ಜೀವನದ ಬಹುತೇಕ ಅವಧಿಯನ್ನು ಚಿಂಚೋಳಿ, ಬೀದರ್ ಗಳಲ್ಲಿ ಕಳೆದಿದ್ದರು. ನಿವೃತ್ತಿಯ ನಂತರ ಕಲಬುರಗಿಯಲ್ಲಿ ವಾಸಿಸುತ್ತಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com