ಪಿಕಪ್‌ ಟ್ರಕ್‌ನ ಟಯರ್‌ನಿಂದ ಚಿಮ್ಮಿದ ಕಲ್ಲಿಗೆ ಬಲಿಯಾಯ್ತು 1 ವರ್ಷದ ಮಗು…

ಕಾರವಾರ : ಪಿಕಪ್‌ ಟ್ರಕ್‌ ಒಂದು ಚಲಿಸುವಾರ ವಾಹನದ ಟಯರ್‌ನಿಂದ ಕಲ್ಲೊಂದು ಚಿಮ್ಮಿ ಕಾರ್ಮಿಕ ದಂಪತಿಯ ಮಗುವಿಗೆ ಬಡಿದು ಮಗು ಸ್ಥಳದಲ್ಲಿ ಸಾವಿಗೀಡಾಗಿರುವ ಘಟನೆ ಕಾರವಾರದ ಸಾತ್ದೊಡ್ಡಿ ಪ್ರದೇಶದಲ್ಲಿ ನಡೆದಿದೆ.

ಮೃತ ಮಗುವನ್ನು ಶಿರಹಟ್ಟಿಯ ಅರ್ಪಿತಾ ಸಣ್ಣಪ್ಪ ಹರಿಜನ ಎಂದು ತಿಳಿದುಬಂದಿದೆ. ಸಾತ್ದೊಡ್ಡಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕೆಲಸಕ್ಕೆಂದು ಕೂಲಿ ಕಾರ್ಮಿಕ ದಂಪತಿ ಬಂದಿದ್ದರು. ಮಗುವನ್ನು ರಸ್ತೆ ಬದಿ ಮಲಗಿಸಿ ಕೆಲಸ ಮಾಡುತ್ತಿದ್ದರು.

ಈ ವೇಳೆ ನೀರನ್ನು ತುಂಬಿಕೊಂಡು ಬರುತ್ತಿದ್ದ ಪಿಕಪ್ ಟ್ರಕ್‌ ಒಂದರ ಟಯರ್‌ನಿಂದ ಕಲ್ಲು ಚಿಮ್ಮಿದ್ದು, ರಸ್ತೆ ಪಕ್ಕ ಮಲಗಿದ್ದ ಮಗುವಿನ ತಲೆಗೆ ಹೊಡೆದಿದೆ. ಕಲ್ಲು ತಾಗಿ ಮಗು ಅಳುವುದನ್ನು ನೋಡಿದ ಪೋಷಕರು ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸುತ್ತಿದ್ದು, ಮಾರ್ಗಮಧ್ಯೆಯೇ ಮಗು ಮೃತಪಟ್ಟಿದೆ. ಘಟನೆ ಸಂಬಂದ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com