ದಿಢೀರನೆ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದ ರಜಿನೀಕಾಂತ್‌

ಹೈದರಾಬಾದ್‌ : ತಮಿಳಿನ ಸೂಪರ್‌ ಸ್ಟಾರ್‌ ರಜನೀಕಾಂತ್‌ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ.

ಮಂಗಳವಾರ ಮುಂಜಾನೆ 6.30ರ ಸುಮಾರಿಗೆ ಮಠದ ಸಿಬ್ಬಂದಿಗೂ ಮಾಹಿತಿ ನೀಡದಂತೆ ರಜೀನೀಕಾಂತ್‌ ಆಗಮಿಸಿ ರಾಯರ ದರ್ಶನ ಪಡೆದಿದ್ದಾರೆ. ಜೊತೆಗೆ ಮೂಲರಾಮನ ದರ್ಶನ ಪಡೆದು ಬಳಿಕ ಮಠದ ಪೀಠಾಧಿಪತಿ ಸುಬುದೇಂದ್ರ ತೀರ್ಥರಿಂದ ಆಶಿರ್ವಚನ ಪಡೆದು 7.30ರ ಸುಮಾರಿಗೆ ವಾಪಸ್‌ ತೆರಳಿದ್ದಾರೆ.

ಇಷ್ಟಾದರೂ ದಿಢೀರನೆ ಮಠಕ್ಕೆ ಭೇಟಿ ನೀಡಿದ ರಜಿನಿಯವರನ್ನು ನೋಡಲು ಜನರ ದಂಡು ಹರಿದುಬಂದಿದ್ದು, ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಹರಸಾಹಸಪಟ್ಟಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com