108 ಅಡಿ ಎತ್ತರದ ಹನುಮನ ಪ್ರತಿಮೆಯನ್ನು ಏರ್‌ಲಿಫ್ಟ್‌ ಮೂಲಕ ಸ್ಥಳಾಂತರಿಸಿ : ದೆಹಲಿ ಹೈಕೋರ್ಟ್‌

ದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಅನಧಿಕೃತ ಕಟ್ಟಡಗಳ ಹಾವಳಿ ಹೆಚ್ಚಾಗಿದ್ದು, ಈ ಕುರಿತು ದೆಹಲಿ ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವುದರ ಜೊತೆಗೆ ಕರೋಲ್‌ಬಗ್‌ನಲ್ಲಿರುವ 108 ಅಡಿ ಎತ್ತರದ ಹನುಮನ ಮೂರ್ತಿಯನ್ನೂ ಏರ್‌ಲಿಫ್ಟ್‌ ಮೂಲಕ  ಸ್ಥಳಾಂತರಿಸುವಂತೆ ಆದೇಶಿಸಿದೆ.

ಕರೋಲ್‌ ಬಗ್‌ನಲ್ಲಿ ಅಕ್ರಮ ಕಟ್ಟಡಗಳ ಸಂಖ್ಯೆ ಹೆಚ್ಚಿದ್ದು, ಅವುಗಳನ್ನು ತೆರವುಗೊಳಿಸುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ಕುರಿತು ನ್ಯಾಯಮೂರ್ತಿ ಗೀತಾ ಮಿತ್ತಲ್‌ ಹಾಗೂ ನ್ಯಾ. ಹರಿಶಂಕರ್ ಅವರಿದ್ದ ದ್ವಿಸದಸ್ಯ ಪೀಠ, ಹನುಮನ ಪ್ರತಿಮೆಯನ್ನೂ ತೆರವುಗೊಳಿಸಲು ಆದೇಶಿಸಿದೆ.

ಅಲ್ಲದೆ ಈ ಕುರಿತು ಲೆಫ್ಟಿನೆಂಟ್‌ ಗವರ್ನರ್‌ ಅವರೊಂದಿಗೆ ಚರ್ಚಿಸುವಂತೆ ಸ್ಥಳೀಯ ಆಡಳಿತಕ್ಕೆ ನಿರ್ದೇಶನ ನೀಡಿದ್ದು, ಮುಂದಿನ ವಿಚಾರಣೆಯನ್ನು ನ.24ಕ್ಕೆ ಮುಂದೂಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com