WATCH : ‘ಈಗಲೇ ಹೆಂಡತಿಯ ಗುಲಾಮನಾಗಿದ್ದೀಯಾ..!’ : ಮದುಮಗ ಭುವಿ ಕಾಲೆಳೆದ ಧವನ್.!

ಟೀಮ್ ಇಂಡಿಯಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ನವೆಂಬರ್ 23 ರಂದು ಗೆಳತಿ ನುಪುರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ. ಮದುವೆಯ ಕಾರಣಕ್ಕಾಗಿ ಭುವಿ ಶ್ರೀಲಂಕಾ ಟೆಸ್ಟ್ ಸರಣಿಯಿಂದ ವಿಶ್ರಾಂತಿಯನ್ನು ಪಡೆದಿದ್ದಾರೆ.

Related image

ಆರಂಭಿಕ ಬ್ಯಾಟ್ಸಮನ್ ಶಿಖರ್ ಧವನ್ ತಮ್ಮ ಭುವನೇಶ್ವರ್ ಕುಮಾರ್ ಅವರನ್ನು, ಮದುವೆ ವಿಷಯವಾಗಿ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಶಿಖರ್, ‘ ಟೀಮ್ ಇಂಡಿಯಾ ಕಾ ಏಕ್ ಔರ್ ಶೇರ್, ಜೋರು ಕಾ ಗುಲಾಮ್ ಬನ್ ಜಾಯೇಗಾ ( ಟೀಮ್ ಇಂಡಿಯಾದ ಮತ್ತೊಂದು ಹುಲಿ, ಹೆಂಡತಿಯ ಗುಲಾಮನಾಗಲಿದೆ) ‘ ಎಂದು ಭುವಿ ಕಾಲೆಳೆದಿದ್ದಾರೆ.

Image result for bhuvaneshwar dhawan teases kumar joru ka ghulam

‘ ಮದುವೆ ಅನ್ನೋ ಲಡ್ಡು ತಿಂದವರೂ ಪಶ್ಚಾತ್ತಾಪ ಪಡುತ್ತಾರೆ. ತಿನ್ನದವರೂ ಪಶ್ವಾತ್ತಾಪ ಪಡುತ್ತಾರೆ. ನೀನು ಈಗಾಗಲೇ ಹೆಂಡತಿ ಗುಲಾಮನಾಗಿದ್ದೀಯಾ ಎಂದು ಅನಿಸುತ್ತಿದೆ ‘ ಎಂದು ತಮಾಷೆ ಮಾಡಿದ್ದಾರೆ. ಅದಕ್ಕೆ ಉತ್ತರ ಕೊಟ್ಟಿರುವ ಭುವಿ, ‘ ಅದು ಗುಲಾಮಗಿರಿಯಲ್ಲ. ಅದನ್ನು ಪ್ರೀತಿ ಎನ್ನುತ್ತಾರೆ ‘ ಎಂದಿದ್ದಾರೆ. ಭುವನೇಶ್ವರ್ ಕುಮಾರ್ ಅಕ್ಟೋಬರ್ 4 ರಂದು ನುಪುರ್ ನಗರ್ ಅವರೊಂದಿಗೆ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com