Interesting : ಚೈನೀಶ್‌ ಜ್ಯೋತಿಷ್ಯದ ಪ್ರಕಾರ ನೀವು ಯಾವ ಪ್ರಾಣಿಯನ್ನು ಹೋಲುತ್ತೀರಿ….ನೋಡಿ..

ಚೀನಾ ಸಂಸ್ಕೃತಿಯನ್ನು ಪ್ರಪಂಚದ ಪುರಾತನ ಸಂಸ್ಕೃತಿಗಳಲ್ಲೊಂದು ಎಂದು ಹೇಳಲಾಗುತ್ತದೆ. ಭಾರತದಲ್ಲಿ ಹುಟ್ಟಿದ ದಿನ, ನಕ್ಷತ್ರ, ತಿಥಿ, ದಿನಾಂಕಗಳ ಮೇಲೆ ರಾಶಿಯನ್ನು ಗುರುತಿಸುತ್ತಾರೋ ಅದೇ ರೀತಿ ಚೀನಾದಲ್ಲೂ ಹುಟ್ಟಿದ ವರ್ಷದ ಆಧಾರದ ಮೇಲೆ ಗುರುತಿಸಿ ಪ್ರಾಣಿಗಳನ್ನು ರಾಶಿಗಳ ಆಧಾರದ ಮೇಲೆ ಗುರುತಿಸುತ್ತಾರೆ. ಯಾವ ರಾಶಿಯವರು ಯಾವ ಪ್ರಾಣಿಯ ಗುಣ ಲಕ್ಷಣ ಹೊಂದಿರುತ್ತಾರೆ ಎಂಬುದನ್ನು ಕಂಡು ಹಿಡಿಯುತ್ತಾರಂತೆ.

ಹಾವು : 1941, 1953,, 1965, 1977,1989, 2001,2013ರಲ್ಲಿ ಜನಿಸಿದವರ ರಾಶಿ ಹಾವು. ಅವರ ಗುಣಲಕ್ಷಣ ಸಹ ಹಾವಿನಂತೆಯೇ ಇರುತ್ತದೆಯಂತೆ.

ಕುದುರೆ : 1942, 1954, 1966, 1978,1990, 2002, 2014ರಲ್ಲಿ ಹುಟ್ಟಿದ ವ್ಯಕ್ತಿಗಳ ರಾಶಿ ಕುದುರೆ. ಚೈನೀಸ್‌ ಕ್ಯಾಲೆಂಡರ್‌ ಪ್ರಕಾರ ಈ ಇಸವಿಯಲ್ಲಿ ಜನಿಸಿದವರು ಕುದುರೆಯ ಗುಣ ಲಕ್ಷಣಗಳನ್ನು ಹೊಂದಿರುತ್ತಾರಂತೆ.

ಮೇಕೆ : 1943, 1955, 1967, 1979,1991,2003, 2015ರಲ್ಲಿ ಜನಿಸಿದ ವ್ಯಕ್ತಿಗಳು ಮೇಕೆಯಂತಹ ಸ್ವಭಾವವನ್ನು ಹೊಂದಿರುತ್ತಾರೆ.

ಕೋತಿ : 1944, 1956, 1968, 1980, 1992, 2004, 2016ರಲ್ಲಿ ಹುಟ್ಟಿದವರದ್ದು ಕೋತಿಯ ರಾಶಿಯಾಗಿದ್ದು, ಇವರು ಬಹಳ ಚುರುಕಿನ ವ್ಯಕ್ತಿತ್ವ ಹೊಂದಿರುತ್ತಾರೆ. ತಮ್ಮ ಕೆಲಸಗಳನ್ನು ಬೇಗನೆ ಮುಗಿಸುತ್ತಾರೆ.

ಕೋಳಿ : 1945, 1957, 1969,1981, 1993, 2005, 2017. ಚೀನೀಯರ ಕ್ಯಾಲೆಂಡರ್‌ ಪ್ರಕಾರ ಈ ರಾಶಿಯವರು ಕೋಳಿಯ ರಾಶಿಯವರಾಗಿರುತ್ತಾರೆ .

ನಾಯಿ : 1946, 1958, 1970, 1982, 1994, 2006, 2018ರಲ್ಲಿ ಜನಿಸಿದವರು ನಾಯಿಗೆ ಇರುವಂತಹ ಗುಣಗಳಿದ್ದು ನಿಯತ್ತಿನಿಂದಿರುತ್ತಾರೆ.

ಹಂದಿ : 1947, 1959, 1971, 1983, 1995, 2007, 2019ರಲ್ಲಿ ಜನಿಸಿದವರದ್ದು ಹಂದಿಯ ರಾಶಿಯಂತೆ.

ಇಲಿ : 1948, 1960, 1972, 1984, 1996, 2008, 2020 ಈ ಇಸವಿಯಲ್ಲಿ ಹುಟ್ಟಿದವರು ಇಲಿಯ ರಾಶಿ ಯಾಗಿದ್ದು, ಬಹಳ ಸೂಕ್ಷ್ಮ ಹಾಗೂ ಹೆಚ್ಚಿನ ಕೋಪಿಷ್ಠರಾಗಿರುತ್ತಾರೆ.

ಎತ್ತು : 1949, 1961, 1973, 1985, 1997, 2009, 2021ನೇ ಇಸವಿಯಲ್ಲಿ ಜನಿಸಿದವರು ಎತ್ತಿನ ರಾಶಿಯವರಾಗಿದ್ದು, ಹೆಚ್ಚಿನ ಶ್ರಮ ಪಡುತ್ತಾರೆ ಎನ್ನಲಾಗಿದೆ.

ಹುಲಿ : 1950, 1962, 1986, 1974, 1998, 2010, 2022 ಈ ವರ್ಷದವರು ಹುಲಿ ರಾಶಿಯಲ್ಲಿ ಜನಿಸಿದವರಾಗಿರುತ್ತಾರೆ.

ಮೊಲ : 1951, 1963, 1975, 1987, 1999, 2023 ರಲ್ಲಿ ಜನಿಸಿದವರು ಮೊಲದ ರಾಶಿಯವರಾಗಿರುತ್ತಾರೆ.

ಡ್ರ್ಯಾಗನ್‌ ; 1952, 1964, 1976, 1988, 2000, 2012, 2024ರಲ್ಲಿ ಜನಿಸಿದವರಿಗೆ ಡ್ರ್ಯಾಗನ್‌ನ ಗುಣಗಳಿರುತ್ತವೆ ಎಂದು ಚೀನಾದ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದಂತೆ.

Leave a Reply

Your email address will not be published.