BiggBoss : ಎಲ್ಲರ ಊಹೆಯನ್ನೂ ಸುಳ್ಳಾಗಿಸಿದ ನಿವೇದಿತಾ ಗೌಡ…ಆಗಿದ್ದೇನು…?

ಈ ವಾರದ ಬಿಗ್‌ಬಾಸ್‌ ಮನೆಯ ಕ್ಯಾಪ್ಟನ್‌ ಆಗಿ ನಿವೇದಿತಾ ಗೌಡ ಆಯ್ಕೆಯಾಗಿದ್ದಾರೆ. ಅದೂ ಸಾಮಾನ್ಯ ಜ್ಞಾನದ ಪ್ರಶ್ನೆಗೆ ಉತ್ತರಿಸಿ ಟಾಸ್ಕ್‌ ಗೆದ್ದು ಆಯ್ಕೆಯಾಗಿರುವುದು ವಿಶೇಷ.
ಬಿಗ್‌ಬಾಸ್‌ ಮನೆಯಲ್ಲಿ ಈಗಲೂ ನಿವೇದಿತಾ ಗೌಡ ಅವರನ್ನು ಚಿಕ್ಕ ಹುಡುಗಿಯಂತೆ ಟ್ರೀಟ್ ಮಾಡುತ್ತಾರೆ. ಅಲ್ಲದೆ ಆಕೆ ಮಗು ಥರಾ, ಆಕೆಗೆ ಏನೂ ತಿಳಿಯುವುದಿಲ್ಲ ಎಂಬುದು ಕೆಲವರ ಅಭಿಪ್ರಾಯ. ಆಕೆಗೆ ಸ್ಟೆಂತ್‌ ಇಲ್ಲ, ಆಕೆಗೆ ಏನೂ ತಿಳಿದಿಲ್ಲ ಎಂಬ ಅಭಿಪ್ರಾಯಪಟ್ಟಿದ್ದರು.

ಆದರೆ ಆ ಮಾತನ್ನು ನಿವೇದಿತಾ ಗೌಡ ಸುಳ್ಳು ಮಾಡಿದ್ದು, ಬಿಗ್‌ಬಾಸ್‌ ಮನೆಯ ಆರನೇ ಕ್ಯಾಪ್ಟನ್‌ ಆಗಿ ಆಯ್ಕೆಯಾಗಿದ್ದಾರೆ.
ಸೋಮವಾರದ ಎಪಿಸೋಡ್‌ನಲ್ಲಿ ಬಿಗ್‌ಬಾಸ್‌ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದ್ದರು. ಇದರಲ್ಲಿ ಮನೆಯ ಕಿರಿಯ ಸದಸ್ಯೆ ನಿವೇದಿತಾ ನಾಲ್ಕಕ್ಕೆ ಸರಿಯಾದ ಉತ್ತರ ನೀಡಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com