ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಲು ನಿಮ್ಮ ಮೋದಿಗೆ ಹೇಳಿ : ಸಿದ್ದರಾಮಯ್ಯ

ಬೆಳಗಾವಿ : ಬೆಳಗಾವಿಯಲ್ಲಿ ನಡೆಯುತ್ತಿರುವ  ಅಧಿವೇಶನದಲ್ಲಿ ಇಂದು ಮದ್ಯ ನಿಷೇದ ಕುರಿತಂತೆ ಸಿಎಂ ಸಿದ್ದರಾಮಯ್ಯಹಾಗೂ ಬಿಜೆಪಿಗರ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು. ಈ ಸಂದರ್ಭದಲ್ಲಿ ಬಿಜೆಪಿ ವಿರುದ್ದ ಕಿಡಿ ಕಾರಿದ ಸಿದ್ದರಾಮಯ್ಯ, ಸಂಪೂರ್ಣ ಮಧ್ಯ ನಿಷೇಧ ಮಾಡುವಂತೆ ನಿಮ್ಮ ಮೋದಿಗೆ ಹೇಳಿ. ನಮಗೆ ಸಂಪೂರ್ಣವಾಗಿ ಮದ್ಯ ನಿಷೇಧ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಇದೇ ವೇಳೆ  ಮಾತನಾಡಿದ ಸಿ.ಟಿ ರವಿ, ನಾವು ಸಾರಾಯಿ ನಿಷೇಧ ಮಾಡಿ ಒಂದು ಹೆಜ್ಜೆ ಇಟ್ಟಿದ್ದೇವೆ. ನೀವು ಮಧ್ಯ ನಿಷೇದ ಮಾಡಿ ಮತ್ತೊಂದು ಹೆಜ್ಜೆ ಇಡಿ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಮೊದಲು ಒಂದು ಪಾಕೆಟ್‌ಗೆ 12 ರೂ ಇತ್ತು. 2 ಪ್ಯಾಕೆಟ್‌ಗೆ 24 ಆಗುತ್ತಿತ್ತು. 30 ರೂನೊಳಗೆ ಚಟವೆಲ್ಲ ಮುಗಿಯುತ್ತಿತ್ತು. ಆದರೆ ಈಗ ಕ್ವಾಟರ್‌ಗೆ 70 ರೂ ಇದೆ. 2 ಕ್ವಾಟರ್‌ಗೆ 140 ರೂ ಆಗುತ್ತದೆ ಇದರಿಂದ ಬಡವರಿಗೆ ಲಾಭವಾಗಿಲ್ಲವಲ್ಲ ಎಂದಿದ್ದಾರೆ.

ಇದಕ್ಕೆ ಸಿ.ಟಿ ರವಿ ಮತ್ತೆ ಪ್ರತಿಕ್ರಿಯೆ ನೀಡಿ ಸಿದ್ದರಾಮಯ್ಯನವರೇ ನೀವೇನಾದರೂ ಸಾರಾಯಿ ಭಾಗ್ಯ ನೀಡುವ ಯೋಚನೆ ಮಾಡಿದ್ದೀರಾ ಎಂದು ವ್ಯಂಗ್ಯ ಮಾಡಿದರು. ಇದಕ್ಕೆ ಮತ್ತೆ ಸಿಎಂ ಉತ್ತರಿಸುತ್ತಾ, ಗುಜರಾತ್‌ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸಂಪೂರ್ಣ ಮದ್ಯ ಮಾರಾಟ ನಿಷೇಧ ಸಾಧ್ಯವಾಗಿಲ್ಲ. ರಾಷ್ಟ್ರೀಯ ನೀತಿ ಆದರೆ ಮಾತ್ರ ಮದ್ಯ ನಿಷೇಧ ಮಾಡಲು ಸಾಧ್ಯ. ನಿಮ್ಮ ಮೋದಿಗೆ ಹೇಳಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿ ಎಂದು ಟೀಕಿಸಿದ್ದಾರೆ.

 

 

One thought on “ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಲು ನಿಮ್ಮ ಮೋದಿಗೆ ಹೇಳಿ : ಸಿದ್ದರಾಮಯ್ಯ

Leave a Reply

Your email address will not be published.

Social Media Auto Publish Powered By : XYZScripts.com