Bollywood : ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ : ರಾಧಿಕಾ ಆಪ್ಟೆ ಬಿಚ್ಚಿಟ್ಟ ಸತ್ಯವೇನು..?

ಬಾಲಿವುಡ್ ಚಿತ್ರರಂಗದಲ್ಲಿ ಅವಕಾಶಗಳನ್ನು ಬಯಸಿ, ಸ್ಟಾರ್ ಆಗುವ ಕನಸು ಕಟ್ಟಿಕೊಂಡು ಲಕ್ಷಾಂತರ ಯುವಕ ಯುವತಿಯರು ಮುಂಬೈಗೆ ಬರುತ್ತಾರೆ. ಆದರೆ ಕೆಲವು ನಿರ್ಮಾಪಕರು, ನಿರ್ದೇಶಕರು ಅವಕಾಶಗಳ ಆಸೆ ತೋರಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ. ಈ ಕಾಸ್ಟಿಂಗ್ ಕೌಚ್ ಬಗ್ಗೆ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಶಾಕಿಂಗ್ ಸತ್ಯವೊಂದನ್ನು ಹೊರಹಾಕಿದ್ದಾರೆ.

‘ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಎನ್ನುವುದು ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಪುರುಷರೂ ಇದಕ್ಕೆ ಹೊರತಾಗಿಲ್ಲ. ಸಿನೆಮಾ ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ ಪುರುಷ ನಟರನ್ನೂ ನಾನು ಬಲ್ಲೆ ‘ ಎಂದು ಬಾಲಿವುಡ್ ನಟಿ ರಾಧಿಕಾ ಆಪ್ಟೆ ಹೇಳಿದ್ದಾರೆ.

Image result for bollywood sexual abuse on men

‘ ಮಹಿಳೆಯರು ಮಾತ್ರವಲ್ಲ. ಪುರುಷರು ಸಹ ಲೈಂಗಿಕ ಶೋಷಣೆಗೆ ಒಳಗಾಗುತ್ತಾರೆ. ನಾನು ವಿಶೇಷವಾಗಿ ಬಾಲಿವುಡ್ ಚಿತ್ರರಂಗದ ಬಗ್ಗೆ ಮಾತನಾಡುತ್ತಿದ್ದೇನೆ. ಲೈಂಗಿಕ ಶೋಷಣೆಗೆ ಒಳಗಾದ ಕೆಲವು ಗಂಡಸರನ್ನೂ ನಾನು ಬಲ್ಲೆ. ನಾನು ಅವರ ಹೆಸರನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಶೋಷಣೆ ನಡೆಸಿದ ದೊಡ್ಡ ವ್ಯಕ್ತಿಗಳ ಹೆಸರನ್ನು ಹೇಳುವುದರಿಂದ ನನ್ನ ಕರಿಯರ್ ಹಾಳಾಗುತ್ತದೆ ‘ ಎಂದು ಹೇಳಿದ್ದಾರೆ.

Image result for radhika apte

‘ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಕೊಂಡು ಲೈಂಗಿಕ ಕಿರುಕುಳ ನೀಡುವ ಜನರ ಹೆಸರುಗಳು ಹೊರ ಜಗತ್ತಿಗೆ ತಿಳಿಯಬೇಕು. ಮಹತ್ವಾಕಾಂಕ್ಷಿಗಳಾದ ಕೆಲವು ಜನರು ಅವಕಾಶಗಳಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ನಿಮ್ಮ ವಿರುದ್ಧ ನಡೆಯುವ ಶೋಷಣೆಗೆ ‘no’ ಎನ್ನುವುದನ್ನು ಕಲಿಯಬೇಕು. ನಿಮ್ಮ ಪ್ರತಿಭೆಗೆ ತಕ್ಕ ಪ್ರತಿಫಲ ಒಂದಲ್ಲ ಒಂದು ದಿನ ಸಿಕ್ಕೇ ಸಿಗುತ್ತದೆ ‘ ಎಂದಿದ್ದಾರೆ.

Related image

ರಾಧಿಕಾ ಆಪ್ಟೆ ಬಾಲಿವುಡ್ ನಲ್ಲಿ ‘ ಮಾಂಝಿ : ದ ಮೌಂಟೇನ್ ‘ , ಮ್ಯಾನ್, ಪರಛೇದ್, ಫೋಬಿಯಾ, ಬದ್ಲಾಪುರ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅಕ್ಷಯ್ ಕುಮಾರ್ ಜೊತೆ ನಟಿಸಿರುವ ‘ಪದ್ಮನ್’ ಜನೆವರಿಯಲ್ಲಿ ಬಿಡುಗಡೆಯಾಗಲಿದೆ.

Leave a Reply

Your email address will not be published.

Social Media Auto Publish Powered By : XYZScripts.com