Ranaji Cricket : ಕರ್ನಾಟಕ – ಉತ್ತರ ಪ್ರದೇಶ ಪಂದ್ಯ ಡ್ರಾ : ಮನೀಶ್ ಪಾಂಡೆ ಪಂದ್ಯಶ್ರೇಷ್ಟ

ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಉತ್ತರ ಪ್ರದೇಶ ತಂಡಗಳ ನಡುವೆ ನಡೆದ ರಣಜಿ ಟ್ರೋಫಿ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿದೆ.

ಮೊದಲ ದಿನ ಟಾಸ್ ಗೆದ್ದ ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಮನೀಶ್ ಪಾಂಡೆ ಅಮೋಘ ದ್ವಿಶತಕ ಹಾಗೂ ಡಿ.ನಿಶ್ಚಲ್ ಶತಕಗಳ ನೆರವಿನಿಂದ 655 ರನ್ ಬೃಹತ್ ಮೊತ್ತ ಸೇರಿಸಿತ್ತು. ಉತ್ತರ ಪ್ರದೇಶ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 331 ರನ್ ಗಳಿಗೆ ಆಲೌಟ್ ಆಯಿತು. 224 ರನ್ ಮುನ್ನಡೆ ಪಡೆದರೂ ಸಹ ಫಾಲೋವ್ ಆನ್ ನೀಡದ ಕರ್ನಾಟಕ ಎರಡನೇ ಇನ್ನಿಂಗ್ಸ್ ಆರಂಭಿಸಿತು.

ಕರ್ನಾಟಕದ ಆರಂಭಿಕ ಬ್ಯಾಟ್ಸಮನ್ ಗಳಾದ ಆರ್.ಸಮರ್ಥ್ ಹಾಗೂ ಮಯಂಕ್ ಅಗರವಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಬಾರಿಸಿದರು. ಪರಿಣಾಮವಾಗಿ ಕರ್ನಾಟಕ ಯಾವುದೇ ವಿಕೆಟ್ ನಷ್ಟವಿಲ್ಲದೇ 262 ರನ್ ಗಳಿಸಿತು. 4ನೇ ದಿನದಾಟ ಮುಗಿದ ಕಾರಣ ಪಂದ್ಯ ‘ಡ್ರಾ’ ಎಂದು ಘೋಷಿಸಲಾಯಿತು.

ಕರ್ನಾಟಕದ ಪರವಾಗಿ ಅಮೋಘ ದ್ವಿಶತಕ ಬಾರಿಸಿದ ಮನೀಶ್ ಪಾಂಡೆ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

Leave a Reply

Your email address will not be published.

Social Media Auto Publish Powered By : XYZScripts.com