ಮಾಜಿ ವಿಂಬಲ್ಡನ್ ಚಾಂಪಿಯನ್ ಟೆನಿಸ್ ಆಟಗಾರ್ತಿ ಜಾನಾ ನೊವೊಟ್ನಾ ನಿಧನ

ಮಾಜಿ ವಿಂಬಲ್ಡನ್ ಚಾಂಪಿಯನ್ ಟೆನಿಸ್ ಆಟಗಾರ್ತಿ ಜಾನಾ ನೊವೊಟ್ನಾ ನಿಧನರಾಗಿದ್ದಾರೆ. 49 ವರ್ಷ ವಯಸ್ಸಾಗಿದ್ದ ಜಾನಾ ನೊವೊಟ್ನಾ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಜೆಕ್ ಗಣರಾಜ್ಯದ ಜಾನಾ ನೋವೊಟ್ನಾ 1998 ರಲ್ಲಿ ಮಹಿಳೆಯರ ಸಿಂಗಲ್ಸ್ ವಿಂಬಲ್ಡನ್ ಪ್ರಶಸ್ತಿ ಜಯಿಸಿದ್ದರು.

‘ ಕ್ಯಾನ್ಸರಿನೊಂದಿಗೆ ದೀರ್ಘ ಹೋರಾಟದ ನಡೆಸಿದ ನಂತರ ಜಾನಾ ನೊವೊಟ್ನಾ, ಜೆಕ್ ರಿಪಬ್ಲಿಕ್ ನಲ್ಲಿ ತಮ್ಮ ಕುಟುಂಬದವರು, ಸ್ಥಳೀಯರ ಎದುರು ಚಿರನಿದ್ರೆಗೆ ಜಾರಿದ್ದಾರೆ ‘ ಎಂದು ವುಮೆನ್ಸ್ ಟೆನಿಸ್ ಅಸೋಸಿಯೇಶನ್ ಹೇಳಿಕೆ ನೀಡಿದೆ.

Image result for jana novotna duchess of kent

1993 ರ ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ಸ್ಟೆಫಿಗ್ರಾಫ್ ವಿರುದ್ಧ ಸೋಲನುಭವಿಸಿದ್ದ ಜಾನಾ ಕಣ್ಣೀರಿಟ್ಟಿದ್ದರು. ಆಗ ಕೆಂಟ್ ರಾಜಮನೆತನದ ರಾಣಿ ಕ್ಯಾಥರೀನ್, ನೊವೊಟ್ನಾ ಅವರನ್ನು ಸಂತೈಸಿದ್ದರು. 1997 ರ ವಿಂಬಲ್ಡನ್ ಫೈನಲ್ ನಲ್ಲಿ ಮಾರ್ಟಿನಾ ಹಿಂಗಿಸ್ ಅವರ ವಿರುದ್ಧ ಜಾನಾ ಸೋಲನುಭವಿಸಿದ್ದರು. ಆದರೆ 1998 ರ ವಿಂಬಲ್ಡನ್ ಸೆಮಿ ಫೈನಲ್ ನಲ್ಲಿ ಮಾರ್ಟಿನಾ ಅವರನ್ನು ಸೋಲಿಸಿ ಸೇಡು ತೀರಿಸಿಕೊಂಡಿದ್ದರು. ನಂತರ ಫೈನಲ್ನಲ್ಲಿ ಫ್ರಾನ್ಸಿನ ನತಾಲೀ ಅವರನ್ನು ಮಣಿಸಿ ಚಾಂಪಿಯನ್ ಆಗಿದ್ದರು. ಜಾನಾ ನೊವೊಟ್ನಾ ಡಬಲ್ಸ್ ನಲ್ಲಿ 12 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಜಯಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com