ಮಧ್ಯಪ್ರದೇಶದಲ್ಲಿ ದೀಪಿಕಾ ಅಭಿನಯದ ಪದ್ಮಾವತಿ ಸಿನಿಮಾಗೆ ನಿಷೇಧ

ಭೋಪಾಲ್‌ : ಉತ್ತರ ಪ್ರದೇಶ ಸೇರಿದಂತೆ ಹಲವೆಡೆ ಭಾರೀ ವಿವಾದ ಹುಟ್ಟಿಸಿರುವ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಸಿನಿಮಾ ಪ್ರದರ್ಶನಕ್ಕೆ ಮಧ್ಯಪ್ರದೇಶದಲ್ಲಿ ನಿಷೇಧ ಹೇರಲಾಗಿದೆ.

ಸಿನಿಮಾದಲ್ಲಿ ಸತ್ಯವನ್ನು ಮರೆಮಾಚಿ, ಇತಿಹಾಸವನ್ನು ತಿರುಚಲಾಗಿದೆ. ಆದ್ದರಿಂದ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್ ಚೌಹಾಣ್ ಹೇಳಿದ್ದಾರೆ.

ಭಾನುವಾರವಷ್ಟೇ ಪದ್ಮಾವತಿ ಸಿನಿಮಾ ಸೆನ್ಸಾರ್‌ ಮಂಡಳಿಗೆ ಕಳುಹಿಸಿದ ಅರ್ಜಿ ಅಪೂರ್ಣವಾಗಿದೆ ಎಂದು ಅರ್ಜಿಯನ್ನು ವಾಪಸ್‌ ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆಯ ದಿನಾಂಕವನ್ನೂ ಮುಂದೂಡಲಾಗಿದೆ. ಈಗ ಮಧ್ಯ ಪ್ರದೇಶ ಸರ್ಕಾರ ಸಹ ಪದ್ಮಾವತಿ ಚಿತ್ರತಂಡಕ್ಕೆ ಶಾಕ್‌ ನೀಡಿದೆ.

 

Leave a Reply

Your email address will not be published.