ಬಿಕಿನಿ ಹಾಕೋದ್ರ ಬಗ್ಗೆ Bold ಸ್ಟೇಟ್ಮೆಂಟ್ ಕೊಟ್ಟ ಗ್ಲಾಮರಸ್ ಬೆಡಗಿ ರಚಿತಾ ರಾಂ…….
ಕನ್ನಡ ಬೆಳ್ಳೆತೆರೆಯ ಬೆಡಗಿ ರಚಿತಾ ರಾಂ ಸದ್ಯ ದುನಿಯಾ ವಿಜಿ ಅವರ ಜೊತೆ ಜಾನಿ ಜಾನಿ ಎಸ್ ಪಪ್ಪಾ ಎಂಬ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದಲ್ಲಿ ರಚಿತಾ ಎನ್ಆರ್ಐ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈವರೆಗೂ ಮಾಡಿರುವ ಪಾತ್ರಗಳಿಗಿಂತ ಇದೊಂದು ವಿಭಿನ್ನವಾದ ಪಾತ್ರ ಎಂದಿದ್ದಾರೆ.
ಸಿನಿಮಾ ಕುರಿತು ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ರಚಿತಾ ರಾಂ, ನನ್ನ ಪಾತ್ರಕ್ಕೆ ಪಾಶ್ಚಾತ್ಯ ಲುಕ್ನ ಅಗತ್ಯವಿದೆ. ನನ್ನ ಡೈಲಾಗ್ ಸಹ ಇಂಗ್ಲಿಷ್ ಹಾಗೂ ಕನ್ನಡ ಮಿಕ್ಸ್ ಭಾಷೆಯಲ್ಲಿದೆ. ಆದ್ದರಿಂದ ಚಿತ್ರ ತಂಡ ಇದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ ಎಂದಿದ್ದಾರೆ.
ಇದೇ ವೇಳೆ ಗ್ಲಾಮರ್ ವಿಚಾರ ಕುರಿತಂತೆ ರಚಿತಾ ಖಡಕ್ಕಾಗಿ ಮಾತನಾಡಿದ್ದಾರೆ. ಬಿಕಿನಿ ತೊಡುವುದರಿಂದ ಮಾತ್ರ ಗ್ಲಾಮರ್ ಆಗಿ ಕಾಣಿಸುವುದಿಲ್ಲ. ಬಿಕನಿ ತೊಟ್ಟು ಎಕ್ಸ್ಪೋಸ್ ಮಾಡುವುದೇ ಗ್ಲಾಮರ್ನ ವ್ಯಾಖ್ಯಾನ ಎನ್ನುವುದನ್ನು ನಾನು ಒಪ್ಪಲು ತಯಾರಿಲ್ಲ. ನನ್ನ ಪ್ರಕಾರ ಗ್ಲಾಮರ್ ಎಂದರೆ ಸೌಂದರ್ಯ ಹಾಗೂ ಶಾಂತಿಯಿಂದಿರುವುದು. ಬಿಕನಿ ಧರಿಸದಿದ್ದರೂ ಗ್ಲಾಮರಸ್ ಆಗಿ ಕಾಣಬಹುದು ಎಂದಿದ್ದಾರೆ.