ದೀಪಿಕಾ ಕರ್ನಾಟಕದ ಮಗಳು, ಆಕೆಯನ್ನು ನಾವು ರಕ್ಷಣೆ ಮಾಡಬೇಕು : ಡಿಕೆಶಿ

ಬೆಂಗಳೂರು : ವಿವಾದಿತ ಪದ್ಮಾವತಿ ಸಿನಿಮಾವನ್ನು ರಾಷ್ಟ್ರದ ಹಲವೆಡೆ ವಿರೋಧಿಸಲಾಗುತ್ತಿದೆ. ಸೋಮವಾರ ಪದ್ಮಾವತಿ ಸಿನಿಮಾದಲ್ಲಿ ನಟಿಸಿರುವ ದೀಪಿಕಾ, ನಿರ್ದೇಶಕ ಬನ್ಸಾಲಿ  ಅವರ ತಲೆ ತೆಗೆದವರಿಗೆ 10 ಕೋಟಿ ನೀಡುವುದಾಗಿ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ. ಈ ಕುರಿತು ಇಂಧನ ಸಚಿವ ಡಿ.ಕೆ ಶಿವಕುಮಾರ್‌ ಬಿಜೆಪಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೀಪಿಕಾ ಕರ್ನಾಟಕದ ಮಗಳು. ಆಕೆಯ ರಕ್ಷಣೆ ಮಾಡುವುದು ನಮ್ಮ ಹೊಣೆ. ಬಿಜೆಪಿಯಂತಹ ಪ್ಯಾಸಿಸ್ಟ್‌ಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಜೊತೆಗೆ ದೀಪಿಕಾಗೆ ರಕ್ಷಣೆ ನೀಡುವ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com