ಅಯೋಧ್ಯೆಯಲ್ಲಿ ರಾಮಮಂದಿರ, ಲಖನೌದಲ್ಲಿ ಮಸೀದಿ ನಿರ್ಮಾಣವಾಗಲಿ : ಶಿಯಾ ವಕ್ಫ್‌ ಮಂಡಳಿ

ಲಖನೌ : ರಾಮಜನ್ಮಭೂಮಿ ವಿವಾದ ಸಂಬಂಧ ಉತ್ತರ ಪ್ರದೇಶದ ಶಿಯಾ ವಕ್ಫ್‌ ಬೋರ್ಡ್‌ ಪರಿಹಾರವೊಂದನ್ನು ಸೂಚಿಸಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿ, ಲಖನೌದಲ್ಲಿ ಮಸೀದಿಯನ್ನು ನಿರ್ಮಾಣ ಮಾಡಲಿ ಎಂದಿದೆ.

ಶಿಯಾ ವಕ್ಫ್‌ ಭೋರ್ಡ್‌ನ ಅಧ್ಯಕ್ಷ ಸೈಯದ್‌ ವಝೀಮ್ ರಿಜ್ವಿ ಈ ಸಲಹೆ ನೀಡಿದ್ದಾರೆ. ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿಚಾರದಲ್ಲಿನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂದು ನಡೆಸಿದ ಚರ್ಚೆಯಲ್ಲಿ ಈ ಪರಿಹಾರವನ್ನು ಕಂಡುಕೊಂಡಿರುವುದಾಗಿ ಹೇಳಿದ್ದಾರೆ.

ರಾಮಜನ್ಮಭೂಮಿ- ಬಾಬ್ರಿ ಮಸೀದಿ ವಿಚಾರದಲ್ಲಿ  ಈ ಸೌಹಾರ್ದಯುತ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರದ ಪ್ರಕಾರ ಯಾವುದೇ ಹೊಸ ಮಸೀದಿಯನ್ನು ಅಯೋಧ್ಯೆ ಅಥವಾ ಫೈಜಾಬಾದ್‌ನಲ್ಲಿ ಮಸೀದಿಯನ್ನು ನಾವು ನಿರ್ಮಾಣ ಮಾಡುವುದಿಲ್ಲ. ಲಖನೌದಲ್ಲಿ ಮುಸ್ಲೀಮರೇ ಹೆಚ್ಚಿರುವ ಪ್ರದೇಶವನ್ನು ಗುರುತಿಸಿ ಮಸೀದಿ ನಿರ್ಮಿಸುತ್ತೇವೆ ಎಂಬ ಪ್ರಸ್ತಾಪವನ್ನು ಸರ್ಕಾರಕ್ಕೆ ತಿಳಿಸಲಿದೆ.

ಅಲ್ಲದೆ ಡಿಸೆಂಬರ್‌ 5ರಂದು ಇದೇ ವಿಚಾರವನ್ನು ಸುಪ್ರೀಕೋರ್ಟ್‌ಗೂ ಸಲ್ಲಿಸುವ ಕುರಿತು ಹಿಂದೂ ಮುಖಂಡರೊಂದಿಗೆ ಚರ್ಚಿಸುತ್ತಿರುವುದಾಗಿ ಹೇಳಿದ್ದಾರೆ. ವಿವಾದ ಶಾಂತಿಯುತವಾಗಿ ಬಗೆಹರಿಯಬೇಕು ಎಂಬುದು ನಮ್ಮ ಉದ್ದೇಶ ಅದಕ್ಕಾಗಿ ಇಷ್ಟೆಲ್ಲ ಮಾಡುತ್ತಿದ್ದೇವೆ ಎಂದು ರಿಝ್ವಿ ಹೇಳಿದ್ದಾರೆ.

Leave a Reply

Your email address will not be published.