ಮಂಗ್ಳೂರು ಐಡಿಯಲ್ ಐಸ್‌ ಕ್ರೀಂಗೆ “Great Indian Ice cream” ಪ್ರಶಸ್ತಿಯ ಗರಿ

ಮಂಗಳೂರು : ತನ್ನ ರುಚಿಯಿಂದಲೇ ಖ್ಯಾತಿ ಗಳಿಸಿದ್ದ ಮಂಗಳೂರಿನ ಐಡಿಯಲ್‌ ಐಸ್‌ ಕ್ರೀಂ ಈಗ ದೇಶಕ್ಕೇ ಪರಿಚಯವಾಗಿದ್ದು, ಗ್ರೇಟ್ ಇಂಡಿಯನ್‌ ಐಸ್‌ ಕ್ರೀಂ ಎಂಬ ಖ್ಯಾತಿ ಗಳಿಸಿದೆ.

ಕಳೆದ ಗುರುವಾರ ಹರಿಯಾಣದ ಗುರುಗ್ರಾಮದಲ್ಲಿ ಗ್ರೇಟ್‌ ಇಂಡಿಯನ್‌ ಐಸ್‌ ಕ್ರೀಂ ಹಾಗೂ ಫ್ರೋಜನ್‌ ಡೆಸರ್ಟ್‌ ಸೀಸನ್‌ 6 ಸ್ಪರ್ಧೆ ನಡೆದಿತ್ತು. ಈ ಸ್ಪರ್ಧೆಯಲ್ಲಿ ಮಂಗಳೂರಿನ ಐಡಿಯಲ್‌ ಐಸ್‌ ಕ್ರೀ ಬರೋಬ್ಬರಿ ಎಂಟು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಈ ಸ್ಪರ್ಧೆಯಲ್ಲಿ ಸುಮಾರು 103 ಐಸ್‌ ಕ್ರೀಂ ಸಂಸ್ಥೆಗಳು ಭಾಗಿಯಾಗಿದ್ದವು. ಅವುಗಳಲ್ಲಿ ಎಂಟು ಪ್ರಶಸ್ತಿಗಳು ಮಂಗಳೂರಿನ ಐಡಿಯಲ್‌ ಐಸ್‌ ಕ್ರೀಂ ತಯಾರಿಕಾ ಸಂಸ್ಥೆ ಪಾಲಾಗಿದ್ದು, ಬೆಸ್ಟ್ ಇನ್‌ ಇಂಡಿಯಾ ಪ್ರಶಸ್ತಿ ಜೊತೆ 4 ಚಿನ್ನ ಹಾಗೂ 1 ಬೆಳ್ಳೆ ಪದಕವನ್ನು ಬಾಚಿಕೊಂಡಿದೆ.

ಗ್ರಾಹಕರ ಸಹಕಾರ ಹಾಗೂ ಸಿಬ್ಬಂದಿಯ ಶ್ರಮದಿಂದ ಇಂದು ನಮಗೆ ಈ ಪ್ರಶಸ್ತಿ ಲಭಿಸಿದೆ. 2013ರಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಐಡಿಯಲ್ ಐಸ್‌ ಕ್ರೀಂ ವೆನಿಲಾ ಫ್ಲೇವರ್ 3 ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ಪ್ರತಿನಿತ್ಯ ಗ್ರಾಹಕರ ಅಭಿಪ್ರಾಯ ಸಂಗ್ರಹಿಸಿಕೊಂಡು ಉತ್ತಮ ಗುಣಮಟ್ಟದ ಐಸ್‌ಕ್ರೀಂಗಳನ್ನು ಗ್ರಾಹಕರಿಗೆ ಒದಗಿಸುತ್ತಿದ್ದೇವೆ ಎಂದು ಸಂಸ್ಥೆಯ ಮಾಲೀಕ ಮುಕುಂದ್‌ ಕಾಮತ್‌ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com