ಆ ನಳೀನ್‌ ಕುಮಾರ್‌ ಅದ್ಯೇನ್‌ ಮಾತಾಡ್ತಾರೋ ಅವರಿಗೆ ಗೊತ್ತಿರಲ್ಲ, ಇನ್ನು ನನಗೆ ಗೊತ್ತಾಗುತ್ತಾ : ಸಿಎಂ

ಮಂಗಳೂರು : ಸಚಿವ ಪ್ರಮೋದ್‌ ಮಧ್ವರಾಜ್ ಬಿಜೆಪಿ ಸೇರುತ್ತಾರೆ ಎಂಬ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ಪ್ರಮೋದ್‌ ತಾವು ಬಿಜೆಪಿ ಸೇರುತ್ತಿಲ್ಲ ಎಂಬುದರ ಬಗ್ಗೆ ಅನೇಕ ಬಾರಿ ಸ್ಪಷ್ಟನೆ ನೀಡುತ್ತಾರೆ. ಆದರೂ ಬಿಜೆಪಿಯವರು ಬೇಕಂತಲೇ ಇಂತಹ ಹೇಳಿಕೆಗಳನ್ನು ಹಬ್ಬಿಸಿ ಪ್ರಮೋದ್‌ ಅವರ ಇಮೇಜ್ ಹಾಳು ಮಾಡಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ.

ಇದೇ ವೇಳೆ ಸ್ಥಳದಲ್ಲಿದ್ದ ಪ್ರಮೋದ್‌ ಮಧ್ವರಾಜ್‌ ಅವರನ್ನು ಹತ್ತಿರ ಕರೆದು ಏನ್ರೀ ಪ್ರಮೋದ್‌ ನೀವು ಬಿಜೆಪಿ ಸೇರ್ತೀರಂತೆ ನಿಜಾನಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಇಲ್ಲ ಎಂದೇ ಪ್ರಮೋದ್‌ ಉತ್ತರಿಸಿದ್ದಾರೆ. ಅಲ್ಲದೆ ಇದೇ ವೇಳೆ ಮಾಧ್ಯಮದವರು ನಳೀನ್‌ ಕುಮಾರ್ ಅವರು ಈ ಬಗ್ಗೆ ಹೇಳಿದ್ದಾರಲ್ಲ ಎಂದದ್ದಕ್ಕೆ, ಆ ನಳೀನ್‌ ಕುಮಾರ್‌ಗೆ ಬುದ್ದಿಯಿಲ್ಲ. ಸಂಸ್ಕಾರವಂತೂ ಮೊದಲೇ ಇಲ್ಲ. ಅವರು ಏನು ಮಾತಾಡ್ತಾರೋ ಅವರಿಗೇ ಗೊತ್ತಿರಲ್ಲ. ಇನ್ನು ನಮಗೆ ಗೊತ್ತಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com