ಕ್ರಿಮಿನಲ್‌ಗಳನ್ನು ಜೈಲಿಗಟ್ಟಿ ಇಲ್ಲವೇ ಎನ್‌ಕೌಂಟರ್ ಮಾಡಿ ಎಸೆಯಿರಿ : ಯೋಗಿ

ಲಖನೌ : ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಉತ್ತರ ಪ್ರದೇಶದಲ್ಲಿ ಕಾನೂನು ವ್ಯವಸ್ಥೆ ಸುಧಾರಣೆ ಕಂಡಿದೆ. ಅಪರಾಧ ಚಟುವಟಿಕೆಯಲ್ಲಿ ತೊಡಗಿರುವವರನ್ನು ಜೈಲಿಗಟ್ಟಿ ಇಲ್ಲವೇ ಎನ್‌ ಕೌಂಟರ್ ಮಾಡಿ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಗಾಜಿಯಾಬಾದ್‌ನಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಕೈಗಾರಿಕೆಗಳು, ವ್ಯಾಪಾರಿಗಳು ರಾಜ್ಯ ತೊರೆಯಲು ಸಿದ್ದರಾಗಿದ್ದರು. ಆದರೆ ಈಗ ಎಲ್ಲರೂ ರಾಜ್ಯದಲ್ಲೇ ಇರಲು ಬಯಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಬಂಡವಾಳ ಹೂಡಿಕೆದಾರರನ್ನೂ ಆಕರ್ಷಿಸುತ್ತಿದ್ದೇವೆ ಎಂದಿದ್ದಾರೆ.

ಕ್ರಿಮಿನಲ್‌ ಚಟುವಟಿಕೆಯಲ್ಲಿ ತೊಡಗಿರುವವರನ್ನು ಮಟ್ಟ ಹಾಕುತ್ತೇವೆ. ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ  ಯಾವುದೇ ಶಕ್ತಿಗಳನ್ನು ಬಿಡುವುದಿಲ್ಲ. ಒಂದು ವೇಳೆ ಕಾನೂನು ಸುವ್ಯವಸ್ಥೆ ಹಾಳು ಮಾಡುವ ಪ್ರಯತ್ನ ನಡೆಸಿದರೆ, ಅಂತಹವರನ್ನು ಜೈಲಿಗಟ್ಟುತ್ತೇವೆ ಇಲ್ಲವೇ ಎನ್‌ಕೌಂಟರ್ ಮಾಡುವುದಾಗಿ  ಹೇಳಿದ್ದಾರೆ.

 

Leave a Reply

Your email address will not be published.