World Men’s Day : ಪುರುಷರ ಹಕ್ಕಿಗೆ ಆಗ್ರಹ : ಕತ್ತೆಗಳನ್ನಿಟ್ಟು ಪ್ರತಿಭಟಿಸಿದ Crisp ಸಂಸ್ಥೆ

ಅಂತರಾಷ್ಟ್ರೀಯ ಪುರುಷರ ದಿನಾಚರಣೆಯ ಅಂಗವಾಗಿ CRISP ಸಂಸ್ಥೆ ಟೌನ್ ಹಾಲ್ ಎದುರು ಮೌನ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕ್ರಿಸ್ಪ್ ಸಂಸ್ಥೆಯ ಸದಸ್ಯರುಗಳು, ಕತ್ತೆಗಳನ್ನೂ ಕರೆತಂದು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಸಮಾಜ ಹಾಗೂ ರಾಜಕೀಯ ಪಕ್ಷಗಳಿಂದ ಅಲಕ್ಷ್ಯಕ್ಕೊಳಗಾದ ಪುರುಷರ ಸಮಸ್ಯೆಗಳನ್ನು ಬಗೆಹರಿಸಲು, ಪುರುಷರ ಕಲ್ಯಾಣ ಇಲಾಖೆ ಸ್ಥಾಪನೆಯಾಗಬೇಕೆಂದು ಆಗ್ರಹಿಸಿದರು.  ಗಂಡಸರನ್ನು ಉಚಿತ ಬಾಡಿಗಾರ್ಡ್, ಉಚಿತ ATM ಮಷಿನ್ ಗಳಂತೆ ಬಳಸಿಕೊಳ್ಳಬಾರದು.

ಪ್ರಾಣಿಗಳು, ಕತ್ತೆಗಳೂ ಸಹ ಪುರುಷರಿಗಿಂತ ಹೆಚ್ಚಿನ ಹಕ್ಕುಗಳನ್ನು ಹೊಂದಿವೆ ಸದಸ್ಯರು ಹೇಳಿದ್ದಾರೆ. ಪ್ರತಿಭಟನೆಯಲ್ಲಿ 50ಕ್ಕೂ ಹೆಚ್ಚು ಪುರುಷರೊಂದಿಗೆ ಕೆಲವು ಜನ ಮಹಿಳೆಯರೂ ಭಾಗವಹಿಸಿದ್ದರು. CRISP ಸಂಸ್ಥೆಯ ಮುಖ್ಯಸ್ಥರಾದ ಕುಮಾರ್ ಜಹಗೀರದಾರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪುರುಷರ ಆರೋಗ್ಯದ ಬಗ್ಗೆ ಅಧ್ಯಯನ ಹಾಗೂ ಲಿಂಗ ಸಮಾನತೆಗಾಗಿ ಆಗ್ರಹಿಸಿದರು. ಸುಳ್ಳು ಡೌರಿ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಸಿಲುಕಿಸುವವರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದರು.

ಅಂತರರಾಷ್ಟ್ರೀಯ ಪುರುಷರ ದಿನಾಚರಣೆಯನ್ನು ಪ್ರತೀ ವರ್ಷ ನವೆಂಬರ್ 19ರಂದು ಭಾರತ, ಚೀನ, ಅಮೇರಿಕಾ, ಸಿಂಗಪೂರ್, ಯೂ.ಕೆ, ದಕ್ಷಿಣ ಆಫ್ರಿಕಾ, ಕೆನೆಡ, ಡೆನ್ಮಾರ್ಕ್, ಫ್ರಾನ್ಸ್, ಇಟಲಿ, ಪಾಕಿಸ್ತಾನಒಳಗೊಂಡು ಜಗತ್ತಿನಾದ್ಯಂತ ಇನ್ನೂ ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com