ರಣಜಿ ಟ್ರೋಫಿ : ಕರ್ನಾಟಕದ ಬೃಹತ್ ಮೊತ್ತ : ಹಿನ್ನಡೆಯಲ್ಲಿ ಉತ್ತರ ಪ್ರದೇಶ

ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಉತ್ತರ ಪ್ರದೇಶ ತಂಡಗಳ ನಡುವೆ ರಣಜಿ ಟ್ರೋಫಿ ಪಂದ್ಯ ನಡೆಯುತ್ತಿದೆ. ರವಿವಾರ ಮೂರನೇ ದಿನದಾಟದ ಅಂತ್ಯಕ್ಕೆ ಉತ್ತರ ಪ್ರದೇಶ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಕಳೆದುಕೊಂಡು 243 ರನ್ ಸೇರಿಸಿದೆ. ಉತ್ತರ ಪ್ರದೇಶದ ಆರಂಭಿಕ ಬ್ಯಾಟ್ಸಮನ್ ಗಳಾದ ಉಮಂಗ್ ಶರ್ಮಾ 89 ಹಾಗೂ ಶಿವಮ್ ಚೌಧರಿ 57 ರನ್ ಬಾರಿಸಿದರು. ರಿಂಕು ಸಿಂಗ್ ಹಾಗೂ ಉಪೇಂದ್ರ ಯಾದವ್ ಕ್ರೀಸಿನಲ್ಲಿದ್ದಾರೆ. ಕರ್ನಾಟಕದ ಪರವಾಗಿ ರೋನಿತ್ ಮೋರೆ 2 ವಿಕೆಟ್ ಪಡೆದರು.

ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 655 ರನ್ ಬೃಹತ್ ಮೊತ್ತ ಸೇರಿಸಿತ್ತು. ಕರ್ನಾಟಕದ ಪರವಾಗಿ ಅಮೋಘ ದ್ವಿಶತಕ ಬಾರಿಸಿದ ಮನೀಶ್ ಪಾಂಡೆ 31 ಬೌಂಡರಿ, 2 ಸಿಕ್ಸರ್ ಸಿಡಿಸಿದರು. 195 ರನ್ ಗಳಿಸಿದ ಡಿ. ನಿಶ್ಚಲ್ ಕೇವಲ 5 ರನ್ಗಳಿಂದ ದ್ವಿಶತಕ ವಂಚಿತರಾದರು. ಆರಂಭಿಕ ಬ್ಯಾಟ್ಸಮನ್ ಮಯಂಕ್ ಅಗರವಾಲ್ 90 ರನ್ ಬಾರಿಸಿದರು.

ಉತ್ತರ ಪ್ರದೇಶದ ಪರವಾಗಿ ಇಮ್ತಿಯಾಜ್ ಅಹ್ಮದ್ 6 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ ನಲ್ಲಿ ಉತ್ತರ ಪ್ರದೇಶ 412 ರನ್ ಹಿನ್ನಡೆಯಲ್ಲಿದ್ದು, ಕರ್ನಾಟಕ ಪಂದ್ಯದ ಮೇಲೆ ಹಿಡಿದ ಸಾಧಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com