CRICKET : 2ನೇ ಇನ್ನಿಂಗ್ಸ್ ನಲ್ಲಿ ತಿರುಗೇಟು ನೀಡಿದ ಭಾರತ : ಡ್ರಾನತ್ತ ಸಾಗಿದ ಪಂದ್ಯ

ಕೋಲ್ಕಾತಾದ ಈಡನ್ ಗಾರ್ಡನ್ ನಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಡ್ರಾನತ್ತ ಸಾಗಿದೆ. 4ನೇ ದಿನದಾಟದ ಅಂತ್ಯಕ್ಕೆ ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 1 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದೆ.

ಭಾರತದ ಆರಂಬಿಕ ಬ್ಯಾಟ್ಸಮನ್ ಶಿಖರ್ ಧವನ್ 94 ರನ್ ಗಳಿಸಿ ದಸುನ್ ಶಾನಕಗ ಬೌಲಿಂಗ್ ನಲ್ಲಿ ಡಿಕ್ವೆಲಾಗೆ ಕ್ಯಾಚಿತ್ತು ಹೊರನಡೆದು ಶತಕ ವಂಚಿತರಾದರು. ರವಿವಾರ ನಾಲ್ಕನೇ ದಿನದಾಟ ಮುಗಿದಾಗ ಕೆ ಎಲ್ ರಾಹುಲ್ (73*) ಹಾಗೂ ಚೇತೇಶ್ವರ ಪೂಜಾರಾ (2* )ಕ್ರೀಸ್ ನಲ್ಲಿದ್ದಾರೆ.

ಇದಕ್ಕೂ ಮೊದಲು ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 294 ರನ್ ಕಲೆಹಾಕಿ ಆಲೌಟ್ ಆಯಿತು. ಈ ಮೂಲಕ ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 122 ರನ್ನುಗಳ ಮುನ್ನಡೆ ಪಡೆಯಿತು. ಲಂಕಾ ಪರವಾಗಿ ರಂಗನಾ ಹೆರಾತ್ 67 ರನ್ ಬಾರಿಸಿದರು. ಭಾರತದ ಪರವಾಗಿ ವೇಗದ ಬೌಲರುಗಳಾದ ಭುವನೇಶ್ವರ ಕುಮಾರ್ 4, ಮಹಮ್ಮದ್ ಶಮಿ 4, ಉಮೇಶ್ ಯಾದವ್ 2 ವಿಕೆಟ್ ಪಡೆದರು. ಇನ್ನು ಕೇವಲ ಒಂದು ದಿನದ ಆಟ ಬಾಕಿಯಿದ್ದು ಪಂದ್ಯ ಡ್ರಾ ಆಗುವ ಸಾಧ್ಯತೆ ಹೆಚ್ಚಿದೆ.

Leave a Reply

Your email address will not be published.

Social Media Auto Publish Powered By : XYZScripts.com