ಪದ್ಮಾವತಿ ಸಿನಿಮಾ ಬಿಡುಗಡೆ ಮುಂದೂಡಿಕೆ : ಸೆನ್ಸಾರ್‌ ಬೋರ್ಡ್‌ನಿಂದ ಅರ್ಜಿ ತಿರಸ್ಕಾರ

ಮುಂಬೈ : ಭಾರೀ ವಿವಾದ ಸೃಷ್ಟಿಸಿದ್ದ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂದಾಡಲಾಗಿದೆ.

ಸೆನ್ಸಾರ್‌ ಬೋರ್ಡ್‌ನಲ್ಲಿ ಪದ್ಮಾವತಿ ಸಿನಿಮಾದ ಅರ್ಜಿ ತಿರಸ್ಕೃತಗೊಂಡಿದ್ದು, ಅನಿವಾರ್ಯವಾಗಿ  ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ. ಆದರೆ ಸಿನಿಮಾ ಯಾವ ದಿನಾಂಕದಂದು ಪ್ರಸಾರವಾಗುತ್ತದೆ ಎಂಬುದು ಇನ್ನೂ ತಿಳಿದುಬಂದಿಲ್ಲ.

ಕಳೆದ ಎರಡು ದಿನಗಳಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಇದರ ಬಗ್ಗೆ ಮಾಹಿತಿ ನೀಡಿರಲಿಲ್ಲ. ಆದರೆ ಇಂದು ಪದ್ಮಾವತಿ ಸಿನಿಮಾ ರಿಲೀಸ್‌ ಆಗುವ ದಿನಾಂಕವನ್ನು ಮುಂದೂಡುವುದಾಗಿ ಹೇಳಿದ್ದಾರೆ.

ರಜಪೂತರ ರಾಣಿ ಪದ್ಮಿನಿಯನ್ನು ಪದ್ಮಾವತಿ ಸಿನಿಮಾದಲ್ಲಿ ಕೆಟ್ಟದಾಗಿ ತೋರಿಸಲಾಗಿದೆ. ಅಲ್ಲದೆ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ರಜಪೂತರು ಪ್ರತಿಭಟನೆ ನಡಸುತ್ತಿದ್ದಾರೆ. ಅಲ್ಲದೆ ಸಿನಿಮಾ ಬಿಡುಗಡೆಯಾದರೆ ದೀಪಿಕಾ ಹಾಗೂ ಸಂಜಯ್‌ ಲೀಲಾ ಬನ್ಸಾಲಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು.

 

 

 

Leave a Reply

Your email address will not be published.

Social Media Auto Publish Powered By : XYZScripts.com