ರೈಲ್ವೇ ಸ್ಟೇಷನ್‌ನಲ್ಲಿ ಪರಿಚಯವಾದ, ಬಳಿಕ ಲಾಡ್ಜ್‌ಗೆ ಕರೆದೊಯ್ದ….ಆಮೇಲೆ ಆಗಿದ್ದೇ ಬೇರೆ…?

ಬೆಂಗಳೂರು : ರೈಲು ನಿಲ್ದಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ನನ್ನ ಸ್ನೇಹ ಸಂಪಾದಿಸಿ ಬಳಿಕ ನನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಯುವತಿಯೊಬ್ಬರು ಕಾಟನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಹಾವೇರಿ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಬೆಂಗಳೂರಿನ ಯುವತಿ ತನ್ನ ಸಂಬಂಧಿಕರ ಮನೆಗೆಂದು ಹಾವೇರಿಗೆ ರೈಲಿನಲ್ಲಿ ಹೊರಟಿದ್ದಳು. ಹಾವೇರಿಯ ರೈಲು ನಿಲ್ದಾಣದಲ್ಲಿ ಇಳಿದಾಗ ಮರಿಕುಮಾರ್‌ ಎಂಬಾತನ ಪರಿಚಯವಾಗಿದೆ. ಬಳಿಕ ಇಬ್ಬರೂ ಫೋನ್‌ ನಂಬರ್‌ ಬದಲಿಸಿಕೊಂಡು ಮಾತುಕತೆ ನಡೆಸಿದ್ದಾರೆ.

ಬಳಿಕ ಕಳೆದ ಅಕ್ಟೋಬರ್ 4ರಂದು ಮರಿಕುಮಾರ್‌ ಯುವತಿಗೆ ಕರೆ ಮಾಡಿ ಯಶವಂತಪುರ ರೈಲು ನಿಲ್ದಾಣದಲ್ಲಿ ಭೇಟಿಯಾಗುವಂತೆ ಹೇಳಿದ್ದಾನೆ. ಬಳಿಕ ಆಕೆಯನ್ನು ನಿನ್ನ ಬಳಿ ಮಾತನಾಡಬೇಕು ಎಂದು ಕಾಟನ್‌ ಪೇಟೆಯಲ್ಲಿರುವ ಲಾಡ್ಜ್‌ಗೆ ಕರೆದೊಯ್ದಿದ್ದು, ಬಳಿಕ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಒಮ್ಮೆ ಅತ್ಯಾಚಾರವೆಸಗಿದ ಬಳಿಕ ಮತ್ತೆ ಚಿಕ್ಕನಾಯಕನ ಹಳ್ಳಿಯಲ್ಲಿರುವ ತನ್ನ ಸಂಬಂಧಿಕರ ಮನೆಗೂ ಬರುವಂತೆ ಬೆದರಿಕೆ ಹಾಕಿದ್ದಾನೆ. ಬಳಿಕ ಅಲ್ಲೂ ಆಕೆಯ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಹಾವೇರಿಗೆ ಕರೆತಂದು ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಯುವತಿ ಹೇಳಿದ್ದಾಳೆ.

Leave a Reply

Your email address will not be published.

Social Media Auto Publish Powered By : XYZScripts.com