17 ವರ್ಷಗಳ ಬಳಿಕ ವಿಶ್ವಸುಂದರಿ ಪಟ್ಟ ಗೆದ್ದ ಭಾರತದ ಕುವರಿ “ಮಾನುಷಿ ಚಿಲ್ಲಾರ್‌”

ಸನ್ಯಾ : 17 ವರ್ಷಗಳ ಬಳಿಕ ಭಾರತಕ್ಕೆ ಮತ್ತೊಬ್ಬ ಮಿಸ್‌ ವರ್ಲ್ಡ್‌ನ ಗರಿ ಮೂಡಿದೆ. ಭಾರತದ ಹರಿಯಾಣ ಮೂಲದ 21 ವರ್ಷದ ಮಾನುಷಿ ಚಿಲ್ಲಾರ್‌ 2017ರ ಮಿಸ್ ವರ್ಲ್ಡ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಳೆದ 2000ದಲ್ಲಿ ದೇಸೀ ಗರ್ಲ್‌ ಎಂದೇ ಖ್ಯಾತಿ ಪಡೆದಿದ್ದ ಪ್ರಿಯಾಂಕ ಛೋಪ್ರಾ ಮಿಸ್‌ ವರ್ಲ್ಡ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಬಳಿಕ ಭಾರತದ ಯಾರೊಬ್ಬರೂ ಮಿಸ್‌ ವರ್ಲ್ಡ್‌ ಕಿರೀಟ ಗೆದ್ದಿರಲಿಲ್ಲ. ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಮಾನುಷಿ ಮೊದಲ ಸ್ಥಾನ ಪಡೆದಿದ್ದರೆ, ಇಂಗ್ಲೆಂಡ್‌ನ ಸ್ಟೆಪಿನಿ ಹಿಲ್‌ ಮೊದಲ ರನ್ನರ್‌ ಅಪ್‌ ಆಗಿದ್ದಾರೆ. ಮೆಕ್ಸಿಕೊದ ಅಂಡ್ರೆಜಾ ಮೆಜಾ ಎರಡನೇ ರನ್ನರ್ ಅಪ್‌ ಆಗಿ ಹೊರಹೊಮ್ಮಿದ್ದಾರೆ.
ಚೀನಾದ ಸನ್ಯಾದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ 108 ದೇಶಗಲ ಸುಂದರಿಯರನ್ನು ಹಿಂದಿಕ್ಕಿರುವ ಮಾನುಷಿಗೆ ಮೊದಲ ಸ್ಥಾನ ದಕ್ಕಿದೆ.


ಮಾನುಷಿ ಚಿಲ್ಲಾರ್ ಇತಿಹಾಸ :
ಮೂಲತಃ ಹರಿಯಾಣ ರಾಜ್ಯದವರಾದ ಮಾನುಷಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದಾರೆ. ದೆಹಲಿಯ ಸೆಂಟ್‌ ಥಾಮಸ್‌ ಸ್ಕೂಲ್‌ ಮತ್ತು ಸೋನ್‌ಪೇಟೆಯ ಭಗತ್‌ ಫೂಲ್‌ ಸಿಂಗ್ ಸರ್ಕಾರಿ ಮೆಡಿಕಲ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಈಕೆ ಕೂಚಿಪುಡಿ ನೃತ್ಯದಲ್ಲಿ ಪರಿಣಿತರಾಗಿದ್ದಲ್ಲದೆ, ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಾಜೆಕ್ಟ್ ಶಕ್ತಿ ಯೋಜನೆಯಡಿ ಮಹಿಳೆಯರ ಋತುಸ್ರಾವದ ಸಮಯದಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಇವರು ಟಾಪ್‌ 5 ಸ್ಥಾನಕ್ಕೆ ಬಂದಾಗ ಪ್ರಶ್ನೋತ್ತರ ಸುತ್ತಿನಲ್ಲಿ ಮಾನುಷಿ ಅವರಿಗೆ ಅತಿ ಹೆಚ್ಚು ಸಂಬಲ ನೀಡುವ ಯಾವ ವೃತ್ತಿಗೆ ನೀವು ಅರ್ಹರು ಎನಿಸುತ್ತದೆ ಮತ್ತು ಯಾಕೆ ಎಂಬ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಈಕೆ, ಸಂಬಲ ಎನ್ನುವುದು ವ್ಯಕ್ತಿಯ ಗೌರವವನ್ನು ನಿರ್ಧರಿಸುವುದಿಲ್ಲ. ತಾಯಿಯಾಗುವುದು ಜೀವನದ ಅತ್ಯಂತ ಗೌರವಯುವತವಾದ ಹುದ್ದೆ. ಕೇವಲ ಹಣದಿಂದ ಪ್ರೀತಿ ಗೌರವ ಸಿಗುತ್ತದೆ ಎಂದು ನನಗೆ ಅನ್ನಿಸುವುದಿಲ್ಲ. ನನ್ನ ತಾಯಿ ನನ್ನ ಜೀವನದ ಸ್ಫೂರ್ತಿ. ಆದ್ದರಿಂದ ತಾಯಿಯಾಗುವ ವೃತ್ತಿಯೇ ಜೀವನದ ದೊಡ್ಡ ಗೌರವದ ಹುದ್ದೆ ಎಂದು ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.

 

 

 

Leave a Reply

Your email address will not be published.

Social Media Auto Publish Powered By : XYZScripts.com