ನ್ಯಾಷನಲ್ ಕುಸ್ತಿ ಚಾಂಪಿಯನ್ಷಿಪ್ : ಚಿನ್ನ ಗೆದ್ದ ಸುಶೀಲ್ ಕುಮಾರ್, ಸಾಕ್ಷಿ ಮಲಿಕ್

ಇಂದೋರಿನಲ್ಲಿ ನಡೆದ ನ್ಯಾಷನಲ್ ಕುಸ್ತಿ ಚಾಂಪಿಯನ್ಷಿಪ್ ನಲ್ಲಿ ಸುಶೀಲ್ ಕುಮಾರ್ ಸ್ವರ್ಣದ ಪದಕ ಜಯಿಸಿದ್ದಾರೆ. ಪುರುಷರ 74 ಕೆ.ಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಶುಕ್ರವಾರ ಸುಶೀಲ್ ಕುಮಾರ್ ಚಿನ್ನ ಗೆದ್ದಿದ್ದಾರೆ.

ಸುಶೀಲ್ ಕುಮಾರ್ ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ವಾಕ್ ಓವರ್ ಜಯ ಪಡೆದಿದ್ದರು. ಸುಶೀಲ್ ಕುಮಾರ್ 2008 ರಲ್ಲಿ ಬೀಜಿಂಗ್ ಓಲಿಂಪಿಕ್ ನಲ್ಲಿ ಕಂಚು ಹಾಗೂ 2012 ರಲ್ಲಿ ಲಂಡನ್ ಓಲಿಂಪಿಕ ನಲ್ಲಿ ರಜತ ಪದಕ ಜಯಿಸಿದ್ದರು.

ಮಹಿಳೆಯರ 62 ಕೆ.ಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್, ಹರಿಯಾಣದ ಪೂಜಾ ತೋಮರ್ ವಿರುದ್ಧ 10-0 ಪಾಯಿಂಟ್ ಗಳಿಂದ ಜಯಿಸಿ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದಾರೆ. 2016 ರಲ್ಲಿ ರಿಯೋ ಓಲಿಂಪಿಕ್ ನಲ್ಲಿ ಸಾಕ್ಷಿ ಮಲಿಕ್ ಕ್ರೀಡಾಕೂಡದಲ್ಲಿ ಕಂಚಿನ ಪದಕ ಗೆದ್ದಿದ್ದರು.

ಮಹಿಳೆಯರ 59 ಕೆ.ಜಿ ವಿಭಾಗದಲ್ಲಿ ಗೀತಾ ಫೋಗಟ್, ರವಿತಾ ಅವರನ್ನು ಮಣಿಸಿ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com