ದೇಶವನ್ನು ಇಬ್ಭಾಗ ಮಾಡಿ ಇನ್ನೆಷ್ಟು ಪಾಕಿಸ್ತಾನ ನಿರ್ಮಿಸಬೇಕೆಂದಿದ್ದೀರಿ..? :ಫಾರೂಕ್‌ ಅಬ್ದುಲ್ಲಾ

ಶ್ರೀನಗರ : ಈಗಾಗಲೆ ಒಂದು ಪಾಕಿಸ್ತಾನವಿದೆ. ಇನ್ನು ಅದೆಷ್ಟು ಪಾಕಿಸ್ತಾನ ನಿರ್ಮಿಸಬೇಕು ಎಂದುಕೊಂಡಿದ್ದೀರಿ. ಭಾರತವನ್ನು ಇನ್ನೂ ಎಷ್ಟು ಭಾಗವನ್ನಾಗಿ ಕತ್ತರಿಸಿ ಹಾಕುತ್ತೀರಿ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ಹೇಳಿದ್ದಾರೆ.

ಶ್ರೀನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪಾಕ್‌ ಆಕ್ರಮಿತ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂದು ನಾನೇ ಹೇಳಿದ್ದೆ. ಅದು ವಾಸ್ತವ ಸತ್ಯ. ಪಾಕಿಸ್ತಾನದಿಂದ ಪಿಒಕೆಯನ್ನು ಕಿತ್ತುಕೊಳ್ಳುವ ಯತ್ನ ಮಾಡಿದರೆ ಅದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಭಾರತದೊಂದಿಗೆ ಯುದ್ಧ ಮಾಡಿಯಾದರೂ ಪಿಒಕೆಯನ್ನು ಪಾಕಿಸ್ತಾನಕ್ಕೆ ಸೇರಿಸುತ್ತೇವೆ ಎಂದಿದ್ದಾರೆ.

ದೆಹಲಿಯಲ್ಲಿ ಕೂತ ರಾಜಕಾರಣಿಗಳಿಗೇನು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಗಡಿಯಲ್ಲಿರುವ ನಮಗೆ ಗೊತ್ತು ನಾವು ಎಂತಹ ಪರಿಣಾಮ ಎದುರಿಸುತ್ತಿದ್ದೇವೆಂದು. ದಿನನಿತ್ಯ ಬಾಂಬ್ ಸ್ಫೋಟದ ಮಧ್ಯೆಯೇ ಬದುಕು ಕಳೆಯುತ್ತಿದ್ದೇವೆ. ಕೇಂದ್ರ ಸರ್ಕಾರದ ಕೋಮು ನೀತಿಗಳಿಂದ ಹೈರಾಣಾಗಿದ್ದೇವೆ. ಕೋಮುವಾದದಿಂದ ಈಗಗಾಲೆ ಒಂದು ಪಾಕಿಸ್ತಾನವನ್ನು ನಿರ್ಮಿಸಿದ್ದೀರಿ. ಹಿಂಸೆಯ ಮುಖಾಂತರ ಮತ್ತೊಂದು ಪಾಕಿಸ್ತಾನ ನಿರ್ಮಿಸಬೇಡಿ ಎಂದಿದ್ದಾರೆ.

 

 

 

Leave a Reply

Your email address will not be published.