ಮುಂಬೈಗೂ ಕಾಲಿಟ್ಟ ಲವ್‌ ಜಿಹಾದ್‌ : ಪತಿಯಿಂದಾಗಿ ನಿತ್ಯ ನರಕ ಅನುಭವಿಸುತ್ತಿದ್ದಾಳೆ ಮಾಜಿ ಮಾಡೆಲ್‌

ಮುಂಬೈ : ಕೇರಳದಲ್ಲಿ ನಡೆಯುತ್ತಿರುವ ಲವ್‌ ಜಿಹಾದ್‌ ಪ್ರಕರಣಗಳು ಈಗ ಮುಂಬೈನಲ್ಲೂ ಕಾಣಿಸಿಕೊಳ್ಳತೊಡಗಿದೆ. ಮುಂಬೈನ ಮಾಜಡಿ ಮಾಡೆಲ್‌ ಒಬ್ಬರಿಗೆ ಮತಾಂತರಗೊಳ್ಳುವಂತೆ ಪತಿ ಚಿತ್ರಹಿಂಸೆ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಪತಿಯಿಂದ ಹಿಂಸೆಗೊಳಗಾದ ಸಂತ್ರಸ್ತೆಯನ್ನು ರಶ್ಮಿ ಶಹಬಾಜ್‌ಕರ್‌ (42) ಎಂದು ಗುರುತಿಸಲಾಗಿದೆ. ರಶ್ಮಿಗೆ ಅವರ ಪತಿ ತನ್ನ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪೀಡಿಸುತ್ತಿರುವುದಾಗಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 

ನಾನು ಹುಟ್ಟಿದ ದಿನದಿಂದಲೂ ಹಿಂದೂ ಧರ್ಮವನ್ನು ಪಾಲಿಸಿಕೊಂಡು ಬಂದಿದ್ದೇನೆ. ಅಲ್ಲದೆ ಅದೇ ಧರ್ಮಕ್ಕೆ ಒಗ್ಗಿಕೊಂಡಿದ್ದೇನೆ. ಆದರೆ ನನ್ನ ಪತಿ ನನ್ನನ್ನು ಅವರ ಧರ್ಮಕ್ಕೆ ಮತಾಂತರಗೊಳ್ಳುವಂತೆ ದಿನನಿತ್ಯ ಹಿಂಸಿಸುತ್ತಿದ್ದಾನೆ. ಮತಾಂತರಗೊಳ್ಳದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡುತ್ತಿರುವುದಾಗಿ ರಶ್ಮಿ ಅಲವತ್ತುಕೊಂಡಿದ್ದಾರೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com