ಜೀನ್ಸ್‌ ಹಾಕಿಕೊಂಡು ಕಾಲೇಜಿಗೆ ಬಂದ ವಿದ್ಯಾರ್ಥಿಗೆ ನಡೆದಾಡಲು ಆಗದಂತಹ ಪರಿಸ್ಥಿತಿಗೆ ತಂದಿಟ್ಟ ಸಿಬ್ಬಂದಿ..?

ಲಖನೌ : ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಸಮವಸ್ತ್ರದ ಬದಲಾಗಿ ಜೀನ್ಸ್ ಪ್ಯಾಂಟ್‌ ಹಾಕಿಕೊಂಡು ಕಾಲೇಜಿಗೆ ಬಂದದ್ದಕ್ಕೆ ಕಾಲೇಜು ಆಡಳಿತ ಮಂಡಳಿ ಪ್ಯಾಂಟ್‌ಗೇ ಕತ್ತರಿ ಹಾಕಿದೆ.

ಉತ್ತರ ಪ್ರದೇಶದ ಕಾನ್ಪುರದ ಸಿಕಂದರ್‌ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಜೀನ್ಸ್ ಪ್ಯಾಂಟ್‌ ಹಾಕಿಕೊಂಡು ಪರೀಕ್ಷೆಗೆ ಹಾಜರಾಗಿದ್ದಾನೆ. ಸಮವಸ್ತ್ರ ಧರಿಸದೇ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಶಾಲಾ ಆಡಳಿತ ಮಂಡಳಿ ಕತ್ತರಿಯಿಂದ ಜೀನ್ಸ್‌ ಪ್ಯಾಂಟನ್ನು ತೊಡೆಯ ಭಾಗದವರೆಗೂ ಕಟ್‌ ಮಾಡಿದ್ದಾರೆ. ಪ್ಯಾಂಟ್‌ ಕತ್ತರಿಸುವ ವೇಳೆ ವಿದ್ಯಾರ್ಥಿಯ ತೊಡೆ ಭಾಗಕ್ಕೆ ಕತ್ತರಿ ತಗುಲಿ ಗಾಯವಾಗಿದೆ.

ಶಾಲೆಯ ಸಿಬ್ಬಂದಿ ನನ್ನ ಮಗನ ಮಾತು ಕೇಳದೆ ಪ್ಯಾಂಟ್ ಕಟ್‌ ಮಾಡಿದ್ದಾರೆ. ಈ ವೇಳೆ ಕತ್ತರಿ ನನ್ನ ಮಗರ ತೊಡೆಯ ಭಾಗಕ್ಕೆ ತಗುಲಿದೆ. ಸಮವಸ್ತ್ರ ಧರಿಸದ ಕಾರಣ ನನ್ನ ಮಗನನ್ನು ಮನೆಗೆ ಕಳುಹಿಸಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಲೇಜು ಆಡಳಿತ ಮಂಡಳಿದೆ ಈ ವರ್ತನೆ ಸರಿಯಲ್ಲ ಎಂದು ವಿದ್ಯಾರ್ಥಿ ತಂದೆ ಹೇಳಿದ್ದಾರೆ.

ಶಾಲಾ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿ ಪೋಷಕರು ದೂರು ದಾಖಲಿಸಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com