ಮೋದಿ ಸರ್ಕಾರಕ್ಕೆ ಮೂಡೀಸ್‌ ಮೇಲೆ ದಿಢೀರ್‌ ಲವ್‌ ಆಗ್ಬಿಟ್ಟಿದೆ : ಚಿದಂಬರಂ ವ್ಯಂಗ್ಯ

ದೆಹಲಿ : ಇಂಟರ್‌ನ್ಯಾಾನಲ್‌ ಮೂಡೀಸ್‌ ರೇಟಿಂಗ್‌ ಸಂಸ್ಥೆಯ ಮೇಲೆ ಕೇಂದ್ರ ಸರ್ಕಾರಕ್ಕೆ ಇದ್ದಕ್ಕಿದ್ದಂತೆ ಲವ್ ಆಗಿದೆ ಎಂದು ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ವ್ಯಂಗ್ಯವಾಡಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಕೇಂದ್ರ ಸರ್ಕಾರ ಮೂಡೀಸ್‌ ರೇಟಿಂಗ್ ವಿಧಾನವನ್ನು ಕಟುವಾಗಿ ಟೀಕಿಸಿತ್ತು. ಅಲ್ಲದೆ ಈ ವಿಧಾನ ಸರಿಯಲ್ಲ. ಇದು ತಪ್ಪು ಎಂದು ಸಚಿವರೊಬ್ಬರು ಸುಧೀರ್ಘ ಪತ್ರ ಬರೆದಿದ್ದರು. ಆದರೆ ಈಗ ಅದೇ ಮೂಡೀಸ್ ರೇಟಿಂಗ್ ವಿಧಾನದ ಮೇಲೆ ಮೋದಿ ಸರ್ಕಾರಕ್ಕೆ ಎಲ್ಲಿಲ್ಲದ ಪ್ರೀತಿ ಹುಟ್ಟಿದೆ ಎಂದು ಅಣಕಿಸಿದ್ದಾರೆ.

ಶುಕ್ರವಾರವಷ್ಟೇ ಮೂಡೀಸ್‌ ಸಂಸ್ಥೆ 13 ವರ್ಷಗಳ ಬಳಿಕ ಭಾರತದ ಸಾಲ ಮರುಪಾವತಿ ಸಾಮರ್ಥ್ಯವನ್ನು ಬಿಎಎ3 ಯಿಂದ ಬಿಎಎ2 ಶ್ರೇಣಿಗೆ ಹೆಚ್ಚಿಸಿದ್ದು, ಮೋದಿ ಸರ್ಕಾರ ಅನೇಕ ಸುಧಾರಣೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಕಾರಣ ದೇಶದ ಆರ್ಥಿಕತೆ ಅಭಿವೃದ್ಧಿ ಕಾಣುತ್ತಿದೆ ಎಂದು ಸಂಸ್ಥೆ ಹೇಳಿತ್ತು.

 

 

 

Leave a Reply

Your email address will not be published.

Social Media Auto Publish Powered By : XYZScripts.com