ಸಿಎಂ ಸಿದ್ದರಾಮಯ್ಯ ಗಂಡೋ, ಹೆಣ್ಣೋ ಅನ್ನೋದೇ….ಡೌಟು : ಈಶ್ವರಪ್ಪ

ಚಿತ್ರದುರ್ಗ : ಸಿಎಂ ಸಿದ್ದರಾಮಯ್ಯ ಗಂಡೋ ಹೆಣ್ಣೋ ಅನ್ನೋ ಸಂಶಯ ನನಗಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್‌ ಈಶ್ವರಪ್ಪ ಹೇಳಿದ್ದು, ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಚಿತ್ರದುರ್ಗದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ಗಂಡೊ, ಹೆಣ್ಣೋ ಎಂಬ ಸಂಶಯವಿದೆ. ಸಮಾಜ ಕಲ್ಯಾಣ ಸಚಿವ ಆಂಜನೇಯರಿಗೆ ಗಂಡು ಎನ್ನಬೇಕೋ. ಹೆಣ್ಣು ಎನ್ನಬೇಕೋ ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಆಂಜನೇಯ ಸಿಎಂ ಸಿದ್ದಾರಾಮಯ್ಯ ಅವರ ನಾಯಿ. ಯಾವಾಗಲೂ ಸಿಎಂ ಬಾಲದಂತೆ ತಿರುಗುತ್ತಿರುತ್ತಾರೆ. ಸಿಎಂ ಬಾಲ ಅಲ್ಲಾಡಿಸುವುದು ಇನ್ನು ಕೇವಲ ನಾಲ್ಕೈದು ತಿಂಗಳು ಮಾತ್ರ ಎಂದಿದ್ದಾರೆ. ನಮ್ಮ ಮೇಲೆ ಕಾಂಗ್ರೆಸ್‌ ಇನ್ನೊಂದು ಕೇಸ್‌ ಹಾಕಿದ್ರೂ ನಾವು ಜಂಗಿ ಕುಸ್ತಿ ಆಡೋಕೆ ಸಿದ್ದರಿದ್ದೇವೆ. ಬಡವರ ದುಡ್ಡಿನಿಂದ ನಿಮಗೆ ಸಂಬಲ ನೀಡುತ್ತಿದ್ದಾರೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com