ಚೀನಾದೆದುರು ಎದೆಯುಬ್ಬಿಸಿ ನಿಲ್ಲುವ ತಾಕತ್ತಿರುವ ಏಕೈಕ ವ್ಯಕ್ತಿ ಮೋದಿ : ಅಮೆರಿಕ ತಜ್ಞ

ವಾಷಿಂಗ್ಟನ್‌ : ಚೀನಾದ ಎದುರು ಎದೆಯುಬ್ಬಿಸಿ ನಿಲ್ಲುವ ತಾಕತ್ತಿರುವ ಏಕೈಕ ವ್ಯಕ್ತಿ ಎಂದರೆ ಅದು ಭಾರತದ ಪ್ರಧಾನಿ ಮೋದಿ ಮಾತ್ರ ಎಂದು ಅಮೆರಿಕದ ತಜ್ಞರೊಬ್ಬರು ಹೇಳಿದ್ದಾರೆ.

ಚೀನಾ ಇತ್ತೀಚೆಗಷ್ಟೇ ಒನ್ ಬೆಲ್ಟ್‌ ಒನ್ ರೋಡ್‌ ಯೋಜನೆ ಹಮ್ಮಿಕೊಂಡಿತ್ತು. ಆದರೆ ಇದಕ್ಕೆ ಅಮೆರಿಕ ಮೌನವಾಗಿತ್ತು. ಈ ಕುರಿತು ಅಮೆರಿಕ ತಜ್ಞರಾದ ಮೈಕೆಲ್‌ ಪಿಲ್ಬರಿ ಅವರು ಅಮೆರಿಕ ಕಾಂಗ್ರೆಸ್‌ನಲ್ಲಿ ಹೇಳಿಕೆ ನೀಡಿದ್ದು, ಚೀನಾದ ಈ ಯೋಜನೆಗೆ ಸೆಡ್ಡು ಹೊಡೆದು ನಿಲ್ಲುವ ತಾಕತ್ತೇನಾದರೂ ಇದ್ದರೆ ಅದು ಕೇವಲ ಮೋದಿಗೆ ಮಾತ್ರ ಎಂದು ಮೋದಿಯವರನ್ನು ಹಾಡಿ ಹೊಗಳಿದ್ದಾರೆ.

ಚೀನಾದ ಅಪಾಯಕಾರಿ ಯೋಜನೆಗಳ ವಿರುದ್ದ, ಚೀನಾ ಅಧ್ಯಕ್, ಕ್ಸಿ ಜಿನ್‌ ಪಿಂಗ್ ವಿರುದ್ದ ಮೋದಿ ಹಾಗೂ ಅವರ ತಂಡ ಧೈರ್ಯವಾಗಿ ಮಾತನಾಡಿದೆ. ಚೀನಾದ ಒನ್ ್ಬೆಲ್ಟ್‌ ಒನ್‌ ರೋಡ್‌ ಯೋಜನೆಗೆ ಸೆಡ್ಡು ಹೊಡೆದು ನಿಂತಿರುವುದು ಮೋದಿ ಸರ್ಕಾರ ಮಾತ್ರ. ಆದರೆ ಇದರಲ್ಲಿ ಅಮೆರಿಕ ಮೌನಕ್ಕೆ ಶರಣಾಗಿದೆ ಎಂದಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com