ಬುಮ್ರಾ Six pack ನೋಡಿ ಹುಡುಗಿ ಶಾಕ್ : ಮಹಿಳಾ ಅಭಿಮಾನಿ ಹೇಳಿದ್ದೇನು..?

ಫಿಟ್ ಹಾಗೂ ಸ್ಲಿಮ್ ಆಗಿರುವ ದೇಹವನ್ನು ಹೊಂದಬೇಕು ಎಂಬುದು ಪ್ರತಿಯೊಬ್ಬರ ಆಸೆ. ಅದರಲ್ಲೂ ಹುಡುಗರು ಸಿಕ್ಸ್ ಪ್ಯಾಕ್ ಬರಿಸಿಕೊಳ್ಳಲು ಗಂಟೆಗಟ್ಟಲೇ ಜಿಮ್ ನಲ್ಲಿ ಬೆವರು ಹರಿಸುತ್ತಾರೆ. ಈ ಸಿಕ್ಸ್ ಪ್ಯಾಕ್ ಮೋಡಿ ಟೀಮ್ ಇಂಡಿಯಾ ಆಟಗಾರರನ್ನೂ ಬಿಟ್ಟಿಲ್ಲ. ನಾಯಕ ವಿರಾಟ್ ಕೊಹ್ಲಿ ತಮ್ಮ ಸಿಕ್ಸ್ ಪ್ಯಾಕ್ ಆ್ಯಬ್ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

ಈಗ ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾಹ್ ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಸಿಕ್ಸ್ ಪ್ಯಾಕ್ ಆ್ಯಬ್ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಟ್ವಿಟರ್ ಫಾಲೋವರ್ಸ್ ಗಳಿಂದ ಅಪಾರ ಮೆಚ್ಚುಗೆಯೂ ಕೂಡ ವ್ಯಕ್ತವಾಗಿದೆ. ಬುಮ್ರಾ ಸಿಕ್ಸ್ ಪ್ಯಾಕ್ ನೋಡಿ ಇಂಪ್ರೆಸ್ ಆಗಿರುವ ಹುಡುಗಿಯೊಬ್ಬಳು ” Oh my goodness, i will be sensless ” (ಓ ಮೈ ಗಾಡ್, ನಾನು ಮೂರ್ಛೆ ಹೋಗಲಿದ್ದೇನೆ) ಎಂದು ಟ್ವೀಟ್ ಮಾಡಿದ್ದಾಳೆ.

Leave a Reply

Your email address will not be published.