ಸ್ವೀಟ್‌ ಕೊಡಿಸ್ತೀನಿ ಬಾ ಅಂತ ಆಸೆ ತೋರಿಸಿದ ಅಂಕಲ್‌….ಬಾಲಕಿಗೆ ಮಾಡಿದ್ದೇನು..?

ಭೋಪಾಲ್ : ಸಿಹಿತಿಂಡಿಯ ಆಸೆ ತೋರಿಸಿ 10 ವರ್ಷದ ಬಾಲಕಿಯ ಮೇಲೆ 65 ವರ್ಷದ ಸೆಕ್ಯುರಿಟಿ ಗಾರ್ಡ್‌ ಹಾಗೂ ಇಬ್ಬರು ಸೇರಿ ಅತ್ಯಾಚಾರ ನಡೆಸಿರುವ ಸಂಗತಿ ಮಧ್ಯಪ್ರದೇಶದಲ್ಲಿ ನಡೆದಿದೆ.

ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಬಾಲಕಿ ಐದನೇ ತರಗತಿಯಲ್ಲಿ ಓದುತ್ತಿದ್ದು, ಆಕೆಯ ಮೇಲೆ 3 ತಿಂಗಳಲ್ಲಿ 3 ಬಾರಿ ಅತ್ಯಾಚಾರ ನಡೆದಿದೆ. ನವೆಂಬರ್‌ 12ರಂದು ಆಕೆಯ ಮೇಲೆ ಅತ್ಯಾಚಾರ ನಡೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸೆಕ್ಯುರಿಟ್ ಗಾರ್ಡ್‌ ನನ್ಹು, ಶಾಲೆಯ ಹತ್ತಿರದ ಪಾನ್‌ ಶಾಪ್‌ ಮಾಲೀಕ ಗೋಕುಲ್‌ ಪನ್ವಾಲಾ ಮತ್ತು ವಾಹನ ಚಾಲಕ ಜ್ಞಾನೇಂದ್ರ ಬಂಧಿತ ಆರೋಪಿಗಳಾಗಿದ್ದಾರೆ. ಇವರೆಲ್ಲರು ಸುಮನ್‌ ಪಾಂಡೆ ಎಂಬುವವರ ಮನೆಗೆ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ.

ಅನೇಕ ದಿನಗಳಿಂದ ಬಾಲಕಿ ಖಿನ್ನತಗೊಳಗಾಗಿ ಮೌನವಾಗಿ ಒಂಟಿಯಾಗಿರುತ್ತಿದ್ದಳು. ಇದನ್ನು ಗಮನಿಸಿದ ತಾಯಿ ಮಗಳನ್ನು ವಿಚಾರಿಸಿದ್ದಾರೆ. ಆದರೆ ಮೊದ ಮೊದಲು ಬಾಲಕಿ ಯಾವುದೇ ವಿಚಾರ ತಿಳಿಸಿರಲಿಲ್ಲ. ಬಳಿಕ ನಡೆದ ಸಂಗತಿಯನ್ನು ವಿವರಿಸಿದ್ದಾಳೆ. ನಂತರ ತಾಯಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪಾಂಡೆ ಬಾಲಕಿಗೆ ಸಿಹಿ ತಿಂಡಿ ನೀಡುವುದಾಗಿ ಹೇಳಿ ಆಕೆಯನ್ನು ಮನೆಗೆ ಕರೆದೊಯ್ಯುತ್ತಿದ್ದ . ಅತ್ಯಾಚಾರವೆಸಗಿದ ಬಳಿಕ ಮಗುವಿಗೆ ಹೆದರಿಸಿ ಯಾರಿಗಾದರೂ ಹೇಳಿದರೆ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಎಂದು ಬಾಲಕಿ  ಹೇಳಿದ್ದಾಳೆ.

ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com