ಸೀರಿಯಲ್‌ ನಿರ್ಮಾಣಕ್ಕಿಳಿದ ಶಿವಣ್ಣ..ಇನ್ಮುಂದೆ ಮನೆ ಮನೆಯಲ್ಲೂ ಹರಿಯಲಿದೆ ಮಾನಸ ಸರೋವರ..!

ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಸಿನಿಮಾದಲ್ಲಿ ಭರ್ಜರಿ ಸಕ್ಸಸ್‌ ಪಡೆದ ಬಳಿಕ ಈಗ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಮ್ಮದೇ ಹೋಂ ಬ್ಯಾನರ್‌ನಡಿ ಹೊಸ ಸೀರಿಯಲ್ ನಿರ್ಮಿಸುತ್ತಿದ್ದು, ತಮ್ಮ ಹೋಂ ಬ್ಯಾನರ್‌ಗೆ ಶ್ರೀಮುತ್ತು ಸಿನಿ ಸರ್ವೀಸ್‌ ಎಂಬ ನಾಮಕರಣ ಮಾಡಲಾಗಿದೆ.

ಈ ಸಿನಿಮಾಗೆ ಶಿವಣ್ಣ ಪುತ್ರಿ ನಿವೇದಿತಾ ನಿರ್ಮಾಪಕಿಯಾಗಿ ಕೆಲಸ ಮಾಡಲಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಶನಿವಾರ ಮುಹೂರ್ತ ಸಮಾರಂಭ ನಡೆದಿದ್ದು, ಈ ಸೀರಿಯಲ್‌ಗೆ ಮಾನಸ ಸರೋವರ ಎಂದು ಹೆಸರಿಡವಲಾಗಿದೆ.

ಧಾರಾವಾಹಿಯಲ್ಲಿ ಪ್ರಣಯರಾಜ ಶ್ರೀನಾಥ್‌, ಪದ್ಮಾವಾಸಂತಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಮಾನಸ ಸರೋವರ ಚಿತ್ರದ ಮುಂದುವರಿದ ಭಾಗ ಎಂದು ಶಿವಣ್ಣ ಹೇಳಿದ್ದಾರೆ.

 

Leave a Reply

Your email address will not be published.