ನಿಮ್ಮ ಬಳಿ ಹಳೆಯ ನಾಣ್ಯ, ನೋಟು ಇದೆಯಾ? ಹಾಗಾದರೆ ಈ ಸುದ್ದಿಯನ್ನು ಮಿಸ್ ಮಾಡದೆ ಓದಿ..

ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹವ್ಯಾಸವಿರುತ್ತದೆ. ಕೆಲವರಿಗೆ ಓದುವುದು, ಬರೆಯುವುದು, ಟಿವಿ ನೋಡುವುದು, ಗೇಮ್ ಆಡುವುದು, ಸ್ಟಾಂಪ್ ಕಲೆಕ್ಟ್ ಮಾಡುವುದು ಹೀಗೆ….
ಇನ್ನೂ ಕೆಲವರು ಹಳೆಯ ನಾಣ್ಯಗಳನ್ನು ಹಾಗೂ ನೋಟುಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿರುತ್ತಾರೆ. ಅಂತಹ ಹಳೆಯ ನಾಣ್ಯ ಸಂಗ್ರಹಿಸುವ ಹವ್ಯಾಸವಿದ್ದವರು ಅದು ಎಷ್ಟೇ ಬೆಲೆಯಾದರೂ ಕೊಳ್ಳುತ್ತಾರೆ.
ಅದೇ ಈಗ ದೊಡ್ಡ ಬ್ಯುಸಿನೆಸ್ ಆಗಿ ಬೆಳೆದಿದೆ. ಓಎಲ್ಎಕ್ಸ್ನಲ್ಲಿ ಹಳೆಯ ನಾಣ್ಯಗಳನ್ನು ಮಾರಾಟಕ್ಕಿಟ್ಟಿದ್ದು, ನಾಣ್ಯ ಅಥವಾ ನೋಟು ಹಳೆಯದಾದಷ್ಟೂ ಅವುಗಳ ಬೆಲೆ ಲಕ್ಷಗಟ್ಟಲೆ ಇದೆ.


ಹೌದು ಆನ್ಲೈನ್ ಮಾರ್ಕೆಟಿಂಗ್ ಸಂಸ್ಥೆಯಾದ ಒಎಲ್ಎಕ್ಸ್ನಲ್ಲಿ ಈ ಹಳೆಯ ನಾಣ್ಯಗಳಿದ್ದವರು ಮಾರಲು ಇಟ್ಟಿದ್ದಾರೆ. 2 ಪೈಸೆ, 5 ಪೈಸೆ, 25 ಪೈಸೆ, 10 ಪೈಸೆಯಂತಹ ನಾಣ್ಯಗಳಿಗೆ ಸಾವಿರದಿಂದ ಪ್ರಾರಂಭವಾಗಿ ಲಕ್ಷಾಂತರ ರೂ ಬೆಲೆ ಕಟ್ಟುತ್ತಿದ್ದಾರೆ. ಅಲ್ಲದೆ ಹವ್ಯಾಸಗಾರರು ಎಷ್ಟೇ ಬೆಲೆಯಾದರೂ ಅದನ್ನು ಕೊಳ್ಳುತ್ತಿದ್ದಾರೆ ಎಂಬುದು ಆಶ್ಚರ್ಯ.
ಅಲ್ಲದೆ ಹಿಂದಿದ್ದ 5 ರೂನ ಟ್ರ್ಯಾಕ್ಟರ್ ಚಿಹ್ನೆ ಇರುವ ನೋಟಿಗೆ ಲಕ್ಷಾಂತರ ರೂ ಬೆಲೆ ಇದೆ. ಈ ಬಗ್ಗೆ ಹಿಂದಿ ದೈನಿಕ ಭಾಷ್ಕರ್ ವರದಿ ಮಾಡಿದೆ. ನಿಮ್ಮ ಬಳಿಯೂ ಇಂತಹ ನಾಣ್ಯಗಳು ಅಥವಾ ಹಳೆಯ ನೋಟುಗಳಿದ್ದರೆ ಓಎಲ್ಎಕ್ಸ್ನಲ್ಲಿ ಹಾಕಿಬಿಡಿ. ಅದೃಷ್ಟವಿದ್ದರೆ ನೀವೂ ಲಕ್ಷಾಧಿಪತಿಗಳಾಗಬಹುದು.

Leave a Reply

Your email address will not be published.

Social Media Auto Publish Powered By : XYZScripts.com