ವೈರಲ್ ಆಗಿದೆ ಮೋದಿ ಭಾಷಣ ಮಾಡುವ ಡಯಾಸ್..!! ಈ ಡಯಾಸ್ ಅಲ್ಲಿ ಅಂತದ್ದೇನಿದೆ..??
ಪ್ರಧಾನಿ ಮೋದಿಯವರು ಏನೇ ಮಾಡಿದರೂ ಸಹ ಸುದ್ದಿಯೇ ಎನ್ನುವುದು ಗೊತ್ತು. ಆದರೆ, ಪ್ರಧಾನಮಂತ್ರಿಗಳು ಭಾಷಣ ಮಾಡುವಾಗ ಅವರ ಮುಂದಿರುವ ಡಯಾಸ್ ಕೂಡ ಸುದ್ದಿ ಮಾಡುತ್ತದೆ ಎಂದರೆ?. ಹೌದು, ಮೋದಿ ಭಾಷಣ ಮಾಡುವ ಡಯಾಸ್ನಲ್ಲಿ ಅಡಗಿರುವ ತಂತ್ರಜ್ಞಾನ ಇದೀಗ ವೈರಲ್ ಆಗಿದೆ.!! ಪ್ರಾಧಾನ ಮಂತ್ರಿಗಳ ಸುರಕ್ಷತೆಗಾಗಿ, ಯಾವುದೇ ಅಪಾಯ ಭಾರದಂತೆ ತಡೆಯಬಹುದಾದ ತಂತ್ರಜ್ಞಾನವನ್ನು ಹೊಂದಿರುವ ಈ ಡಯಾಸ್ ಬಗ್ಗೆ ಇದೀಗ ಅಚ್ಚರಿಯ ಅಂಶಗಳು ಹೊರಬಿದ್ದಿದೆ.
ಈ ಡಯಾಸ್ ಕಂಪ್ಲೀಟ್ ಬುಲ್ಲೆಟ್ ಪ್ರೂಫ್!!
ಮೋದಿ ಅವರು ಎಲ್ಲೇ ಹೋದರು ಅವರ ಮೇಲೆ ಉಗ್ರರ ದಾಳಿ ಭೀತಿ ಇರುವುದರಿಂದ ಎನ್ಎಸ್ಜಿ, ಎಸ್ಪಿಜಿ, ಎಎನ್ಎಫ್ ಮತ್ತು ಬಾಂಬ್ ಪತ್ತೆದಳಗಳು ಕಣ್ಗಾವಲಾಗಿರುತ್ತವೆ ಎಂಬುದು ನಿಮಗೆ ಗೊತ್ತು. ಆದರೆ, ಇವೆಲ್ಲವನ್ನು ಮೀರಿ ಉಗ್ರರು ಗುಂಡಿನ ಅಟ್ಯಾಕ್ ಮಾಡಿದರೆ ಅವರ ರಕ್ಷಣೆಗಾಗಿ ಈ ಬುಲೆಟ್ ಡಯಾಸ್ ತಾಯಾರಾಗಿದೆ.
ಒಂದು ಬುಲ್ಲೆಟ್ ಕೂಡ ಒಳಗೆ ನುಗ್ಗೋಕ್ಕಾಗಲ್ಲ.!!
ಮೋದಿ ಅವರು ಬಳಸುವ ಡಯಾಸ್ ಕೆಲ್ವರ್, ಲೆಕ್ಸಾನ್, ಕಾರ್ಬನ್, ಫೈಬರ್ ಕಾಂಪೊಸೈಟ್ ಹಾಗೂ ಟೈಟಾನಿಯಮ್ ಮೆಟಲ್ಗಳಿಂದ ತಯಾರಾಗಿದೆ. ಉಗ್ರರೇನಾದರೂ ಎಕೆ-47 ಗಿಂತಲೂ ಬಲಿಷ್ಟ ಗನ್ಗಳಿಂದ ಫೈರ್ ಮಾಡಿದರೂ ಸಹ ಈ ಬುಲೆಟ್ ಫ್ರೂಫ್ ಡಯಾಸ್ ಒಳಗೆ ಒಂದು ಗುಂಡು ಸಹ ಒಳಗೆ ನುಗ್ಗೋಕಾಗಲ್ಲ.!!
ಭಾಷಣ ಮಾಡೋಕೆ ಹೇಳಿ ಮಾಡಿಸಿದ ಡಯಾಸ್..!!
ಟಿವಿ ಆಂಕರ್ಗಳು ಕ್ಯಾಮೆರಾ ನೋಡಿಕೊಂಡು ಸ್ಪಷ್ಟವಾಗಿ ಎಲ್ಲವನ್ನು ಹೇಳುತ್ತಾರಲ್ಲ ಅದಕ್ಕೆ ಅವರಿಗೆ ಸಹಾಯ ಮಾಡುವುದು ಕ್ಯಾಮೆರಾ ಮುಂದೆ ಅಳವಡಿಸುವ ಟೆಲಿಪ್ರಾಂಪ್ಟ್ ಎಂದ ಗ್ಯಾಜೆಟ್.!! ಇಂತಹದೊಂದು ವಿಶೇಷ ಟೆಲಿಪ್ರಾಂಪ್ಟ್ ಈ ಡಯಾಸ್ನಲ್ಲಿ ಅಳವಡಿಸಲಾಗಿದೆ. ಇದು ಅವರಿಗೆ ಭಾಷಣೆ ಮಾಡಲು ಸಹಾಯಕವಾಗುತ್ತದೆ.!!
500ಕೆಜಿ ತೂಕದ ಡಯಾಸ್!!
ಸ್ವತಃ ಎಸ್’ಪಿಜಿ ಭದ್ರತಾ ಸಿಬ್ಬಂದಿ ಯಾರ ಕಣ್ಣಿಗೂ ಕಾಣದ ರೀತಿಯಲ್ಲಿ ಈ ಡಯಾಸನ್ನು ಸಿದ್ಧಪಡಿಸುತ್ತಾರೆ, ಅತ್ಯಂತ ಹೆಚ್ಚು ಸುರಕ್ಷಿತ ಈ ಡಯಾಸ್ 500 ಕೆ.ಜಿ ತೂಕ ಹೊಂದಿದೆ ಎನ್ನಲಾಗಿದೆ. ಮೋದಿ ಹೋದಲೆಲ್ಲಾ ಅವರಿಗೂ ಮೊದಲೇ ವಿಮಾನದಲ್ಲಿ ಈ ಸ್ಪೆಷಲ್ ಡಯಾಸ್ ಕೂಡ ಸಂಚರಿಸುತ್ತೆ.!!
ಮೈಕ್ಗಳದ್ದು ವಿಶೇಷತೆ ಇದೆ!!
ಇನ್ನು ಈ ಡಯಾಸ್ನಲ್ಲಿ ಮೋದಿ ಅವರು ಮಾತನಾಡುವ ಮೈಕ್ಗಳಿರುತ್ತವೆಯಲ್ಲ ಆ ಮೈಕ್ಗಳು ಕೂಡ ವಿಶೇಷ ತಂತ್ರಜ್ಞಾನವನ್ನು ಹೊಂದಿರುತ್ತವೆ.ಸುತ್ತಮುತ್ತ ಎಷ್ಟೇ ಶಬ್ದವಾದರೂ ಕೂಡ ಮೋದಿಯವರು ಮಾತಾಡಿದ್ದನ್ನು ಮಾತ್ರವೇ ಇವು ಹೊರಹಾಕುತ್ತವೆ.!!