ಮಂಗಳೂರಿನ ಬಗ್ಗೆ ನಾಸಾ ಬಿಚ್ಚಿಟ್ಟಿದೆ ಭಯಾನಕ ಮಾಹಿತಿ ……ಏನದು…?

ಮಂಗಳೂರು : ಅಮೆರಿಕದ ಬಾಹ್ಯಾಕಾಸ ಸಂಸ್ಥೆ ಕರ್ನಾಟಕದ ಮಂಗಳೂರಿನ ಕುರಿತು ಆಘಾತಕಾರಿ ಸುದ್ದಿಯೊಂದನ್ನು ಪ್ರಕಟಿಸಿದ್ದು, ಇನ್ನು ನೂರು ವರ್ಷಗಳಲ್ಲಿ ಮಂಗಳೂರು ನಗರ ಪೂರ್ತಿಯಾಗಿ ಸಮುದ್ರದಲ್ಲಿ ಮುಳುಗಲಿದೆಯಂತೆ.
2100ರ ವೇಳೆಗ ಮಂಗಳೂರು ಸಂಪೂರ್ಣ ನಗರ ಸಮುದ್ರದಲ್ಲಿ ಮುಳುಗಲಿದೆ ಎಂದು ನಾಸಾದ ವಿಜ್ಞಾನಿಗಳು ಹೇಳಿದ್ದಾರೆ. ವಿಜ್ಞಾನಿಗಳ ಪ್ರಕಾರ ಇನ್ನು ಐವತ್ತರಿಂದ ನೂರು ವರ್ಷಗಳಲ್ಲಿ ಮಂಗಳೂರು ಸಂಪೂರ್ಣವಾಗಿ ಸಮುದ್ರದಲ್ಲಿ ಮುಳುಗಡೆಯಾಗಲಿದೆಯಂತೆ. ಭೂಮಿಯ ತಾಪಮಾನ ಏರುತ್ತಿರುವ ಹಿನ್ನೆಲೆಯಲ್ಲಿ ಮಂಜುಗೆಡ್ಡೆಗಳು ಕರಗಲಾರಂಭಿಸಿದೆ.

ಇಂಥ ಸ್ಥಿತಿ ಹೀಗೆ ಮುಂದುವರೆದಲ್ಲಿ 2100ರ ವೇಳೆಗೆ ದೇಶದ ಕರಾವಳಿ ಭಾಗದ ನಗರಗಳು ಸಮುದ್ರದಲ್ಲಿ ಮುಳುಗಲಿದ್ಯಂತೆ. ನಾಸಾ ವಿಜ್ಞಾನಿಗಳು ತಯಾರಿಸಿರೋ ಗ್ರೇಡಿಯಂಟ್ ಫಿಂಗರ್ ಪ್ರಿಂಟ್ ಮ್ಯಾಪಿಂಗ್ ಎನ್ನುವ ಹವಾಮಾನ ಮುನ್ಸೂಚನೆ ನೀಡುವ ಮಾಪಕ ಈ ಮಾಹಿತಿ ನೀಡಿದೆ. ಅಲ್ಲದೆ ಈ ಉಪಕರಣದಿಂದ ಯಾವ ಪ್ರದೇಶದಲ್ಲಿ ಎಷ್ಟು ಮಂಜುಗೆಡ್ಡೆ ಕರಗುತ್ತಿದೆ. ಯಾವ ಭಾಗದಲ್ಲಿ ಸಮುದ್ರ ಮಟ್ಟ ಎಷ್ಟರ ಮಟ್ಟಿಗೆ ಏರಿಕೆಯಾಗಲಿದೆ. ಎಂಬುದರ ಬಗ್ಗೆಯೂ ಮಾಹಿತಿ ನೀಡುತ್ತಡೆ.
ಈ ಮಾಪಕದ ಪ್ರಕಾರ ಜಗತ್ತಿನ 290 ಬಂದರು ನಗರಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ನ್ಯೂಯಾರ್ಕ್, ಮುಂಬೈ ಹಾಗೂ ಕರ್ನಾಟಕದ ಮಂಗಳೂರು, ಕೋಲ್ಕತ್ತಾ ಹಾಗೂ ಆಂಧ್ರ ಪ್ರದೇಸದ ಕಾಕಿನಾಡ ಪ್ರದೇಶಗಳು ಅಪಾಯದ ಮಟ್ಟ ತಲುಪಿರುವುದಾಗಿ ತಿಳಿದುಬಂದಿದೆ.


ಸದ್ಯ ವಿಶ್ವದ ಒಟ್ಟು ನೀರಿನ ಪ್ರಮಾಣದಲ್ಲಿ ಶೇ. 75ರಷ್ಟು ಅಂಟಾರ್ಟಿಕ ಹಾಗೂ ಧೃವ ಪ್ರದೇಶಗಳಲ್ಲಿ ಮಂಜುಗೆಡ್ಡೆಯ ರೂಪದಲ್ಲಿದದ್ ತಾಪಮಾನ ಏರುತ್ತಾ ಹೋದರೆ ಭೂಮಿಯ ಸ್ಥಿತಿ ಶೋಚನೀಯ ಪರಿಸ್ಥಿತಿಗೆ ತಲುಪಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿಯ ಪ್ರಕಾರ 2100ರ ವೇಳೆಗೆ ಮಂಗಳೂರಿನ ಸಮುದ್ರ ಮಟ್ಟ 10.98 ಸೆ.ಮೀ ಇದ್ದರೆ ಮುಂಬೈನಲ್ಲಿ 15.26 ಸೆ.ಮೀ. ನ್ಯೂಯಾರ್ಕ್ನಲ್ಲಿ 10.65 ಸೆ.ಮೀ ಇರಲಿದೆ ಎನ್ನಲಾಗಿದೆ.

Leave a Reply

Your email address will not be published.