ವೈದ್ಯರ ಮುಷ್ಕರಕ್ಕೆ ಬಲಿಯಾಯ್ತು ಮದುವೆಯಾಗಿ 6 ವರ್ಷದ ಬಳಿಕ ಜನಿಸಿದ ಕರುಳ ಕುಡಿ…

ಕೋಲಾರ : ಮದುವೆಯಾಗಿ ಆರು ವರ್ಷದ ಮೇಲೆ ಹುಟ್ಟಿದ ಮಗು ಖಾಸಗಿ ವೈದ್ಯರ ಮುಷ್ಕರಕ್ಕೆ ಬಲಿಯಾದ ಘಟನೆ ಚಿಕ್ಕ ಬಳ್ಳಾಪುರದ ಚಿಂತಾಮಣಿಯಲ್ಲಿ ನಡೆದಿದೆ.
ಚಿಂತಾಮಣಿಯ ಶ್ವೇತಾ ಹಾಗೂ ಮುನಿಕೃಷ್ಣ ದಂಪತಿಗೆ ಮದುವೆಯಾದ ಆರು ವರ್ಷಗಳ ಬಳಿಕ ಮಗು ಜನಿಸಿತ್ತು. ಆದರೆ ತೀವ್ರ ಜ್ವರದಿಂದ ಬಳಲುತ್ತಿದ್ದ ಮಗುವನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು.

ಮಗುವಿನ ಸ್ಥಿತಿ ಗಂಭೀರವಾಗಿದ್ದ ಕಾರಣ ಮಗುವನ್ನು ಕೋಲಾರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದರು. ಚಿಂತಾಮಣಿಯಲ್ಲೇ ಯಾವುದಾದರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗಬಹುದೆಂದು ಅಲೆದಿದ್ದಾರೆ. ಆದರೆ ಯಾವುದೇ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಸಿಕ್ಕಿಲ್ಲ. ಕೊನೆಗೆ ಕೋಲಾರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಆಂಬುಲೆನ್ಸ್ನಲ್ಲೇ ಮಗು ಪ್ರಾಣಬಿಟ್ಟಿದೆ.
ಆರು ವರ್ಷಗಳ ಬಳಿಕ ಜನಿಸಿದ ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಖಾಸಗಿ ವೈದ್ಯರಿಗೆ ಶಾಪ ಹಾಕುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com