ISIS ಕಪಿಮುಷ್ಟಿಯಲ್ಲಿದ್ದ ಕೊನೆಯ ನಗರವನ್ನೂ ವಶಕ್ಕೆ ಪಡೆದ ಇರಾಕ್ ಸೇನೆ..

ಜಾಗತಿಕ ಭಯೋತ್ಪಾದಕ ಸಂಘಟನೆ ISIS ಕಪಿಮುಷ್ಟಿಯಲ್ಲಿದ್ದ ಕೊನೆಯ ನಗರ ರಾವಾ ಅನ್ನು ಇರಾಕ್ ಸೇನಾಪಡೆಗಳು ವಶಪಡಿಸಿಕೊಂಡಿವೆ. ‘ ಸಿರಿಯಾ ಗಡಿಯಲ್ಲಿದ್ದ ರಾವಾ ಪಟ್ಟಣವನ್ನು, ಐಸಿಸ್ ಉಗ್ರರಿಂದ ವಶಪಡಿಸಿಕೊಳ್ಳಲಾಗಿದೆ ಹಾಗೂ ನಗರದ ಕಟ್ಟಡಗಳ ಮೇಲೆ ಇರಾಕ್ ಧ್ವಜವನ್ನು ಹಾರಿಸಲಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಅಬ್ದುಲ್ ಅಮೀರ್ ರಶೀದ್ ಯಾರಲ್ಲಾಹ್ ಯಾರಲ್ಲಾಹ್ ತಿಳಿಸಿದ್ದಾರೆ.

‘ ರಾವಾ ಪಟ್ಟಣವನ್ನು ವಶಪಡಿಸಿಕೊಳ್ಳುವುದರ ಮೂಲಕ, ಇರಾಕಿನಲ್ಲಿ ಐಸಿಸ್ ಉಗ್ರ ಸಂಘಟನೆಯ ವಶದಲ್ಲಿದ್ದ ಎಲ್ಲ ಪ್ರದೇಶಗಳನ್ನೂ ಹಿಂಪಡೆಯಲಾಗಿದೆ ಎಂದು ಹೇಳಬಹುದು ‘ ಎಂದು ಸೇನೆಯ ವಕ್ತಾರ ಹೇಳಿದ್ದಾರೆ. ಈ ಮೂಲಕ ಐಸಿಸ್ ಇರಾಕ್ ನಲ್ಲಿ ಸಂಪೂರ್ಣವಾಗಿ ತನ್ನ ನೆಲೆಯನ್ನು ಕಳೆದುಕೊಂಡಿದೆ.

ಐಸಿಸ್ ವಿರುದ್ಧದ ಈ ವಿಜಯಕ್ಕಾಗಿ ಇರಾಕ್ ಪ್ರಧಾನಿ ಹೈದರ್ ಅಲ್ ಅಬಾದಿ ಸೇನೆಯನ್ನು ಅಭಿನಂದಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com